ಬಾಗೂರು(ನುಗ್ಗೇಹಳ್ಳಿ): ಬಾಗೂರು ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ದಿವಂಗತ ಬಿ.ಸಿ. ನಂಜೇಗೌಡ ಮತ್ತು ತಾಯಮ್ಮ ದಂಪತಿ ಪುತ್ರ ಬಿ.ಎನ್. ಶಿವನಂಜೇಗೌಡ (ರಾಜು) ಅವರಿಗೆ 20 ವರ್ಷಗಳ ಕಾನೂನು ಹೋರಾಟದ ನಂತರ ಆರ್ಟಿಒ ಹುದ್ದೆ ದೊರೆತಿದೆ. ರಾಜು ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸನ್ಮಾನಿಸಿದರು.

ನೂತನ ಕೋಲಾರ ಶಿವನಂಜೇಗೌಡ ಮಾತನಾಡಿ, 20 ವರ್ಷಗಳ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಜಯ ಸಿಕ್ಕಿದೆ. ಈ ಹುದ್ದೆಗೆ ಏರಲು ಗ್ರಾಮಸ್ಥರ ಸಹಕಾರ, ದೇವರ ಕೃಪೆ, ತಂದೆ ತಾಯಿ, ಗುರು ಹಿರಿಯರ ಆಶೀರ್ವಾದದಿಂದ ಇಂದು ಗೌರವಾನ್ವಿತ ಹುದ್ದೆ ದೊರಕಿದೆ. ನಿರಂತರ ಹೋರಾಟದ ಪರವಾಗಿ ಅನೇಕ ಕಷ್ಟಗಳ ನಡುವೆ ಕೊನೆಗೂ ನನಗೆ ನ್ಯಾಯ ಸಿಕ್ಕಿದೆ. ಸದ್ಯ ಕೋಲಾರ ಜಿಲ್ಲೆ ಆರ್ಟಿಒ ಆಗಿ ನೇಮಕಗೊಂಡಿದ್ದೇನೆ. ಸಿಕ್ಕಿರುವ ಸೇವಾ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು, ಎಲ್ಲರಿಗೂ ಸ್ಪಂದಿಸುವುದಾಗಿ ತಿಳಿಸಿದರು.

ಗ್ರಾಮದ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಐಎಎಸ್, ಕೆಎಎಸ್, ಐಪಿಎಸ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಪರಿಶ್ರಮದೊಂದಿಗೆ ಉತ್ತೀರ್ಣರಾಗಿ ಗ್ರಾಮದ ಹಿರಿಮೆಯನ್ನು ಹೆಚ್ಚಿಸಬೇಕು. ಜೊತೆಗೆ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೂ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದರು.

ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ಮಂಜೇಗೌಡ ಮಾತನಾಡಿ, ನಮ್ಮ ಪುತ್ರ ಹಾಗೂ ಸೊಸೆ ಕೂಡ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೇಂದ್ರ ಸರ್ಕಾರದ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಬಳಿಯ ಮಕ್ಕಳಿಗೆ ಶೈಕ್ಷಣಿಕವಾಗಿ ಉನ್ನತ ಸ್ಥಾನಮಾನ ದೊರಕಲಿ ಎಂಬುದು ನನ್ನ ಆಶಯ. ಗ್ರಾಮದ ಶಿವನಂಜೇಗೌಡ ಅವರು 20 ವರ್ಷಗಳ ನಂತರ ಆರ್ಟಿಒ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಇನ್ನೂ ಉನ್ನತ ಹುದ್ದೆ ಸಿಗಲಿ ಎಂದು ಹಾರೈಸಿದರು.

ಮುಖಂಡರಾದ ಶಂಕರಲಿಂಗೇಗೌಡ ಹಾಗೂ ಮಿಲ್ಟ್ರಿ ಮಂಜು ಮಾತನಾಡಿದರು.

ಹುದ್ದೆ ದೊರೆತ ನಂತರ ಗ್ರಾಮಕ್ಕೆ ಮೊದಲ ಬಾರಿಗೆ ಆಗಮಿಸಿದ ಶಿವನಂಜೇಗೌಡ ಅವರನ್ನು ಗ್ರಾಮದ ಹೆಬ್ಬಾಗಿಲಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಪಟಾಕಿ ಸಿಡಿಸಿ ಬರ ಮಾಡಿಕೊಳ್ಳಲಾಯಿತು. ನಂತರ ಗ್ರಾಮ ದೇವತೆ ಸಂತೆಕಾಳೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಕುಟುಂಬ ಸಮೇತ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿದರು.

ಪ್ರಮುಖರಾದ ಬೆಟ್ಟೆಗೌಡ, ಮನು, ನಿವೃತ್ತ ಯೋಧ ಮಧು, ರೂಪೇಶ್, ಚಂದ್ರೇಗೌಡ, ಕಾಂತರಾಜ್, ಚಂದ್ರಶೇಖರ್, ಮಲ್ಲೇಶ್, ಕಾಳೇಶ್, ಶಿವರಾಜ್, ಮೋಹನ್, ಸೋಮಶೇಖರ್, ಶಿವಶಂಕರ್, ಗಂಗಾಧರ್, ಪ್ರವೀಣ್, ನಿವೃತ್ತ ಶಿಕ್ಷಕ ಕೆಂಪಣ್ಣ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-36-952560460

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.