ಶ್ರೀನಿವಾಸಪುರ: ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಆಗಿ ಗ್ರಾಮದ ನಿವಾಸಿ ಪಿ.ಎನ್. ಮಂಜುನಾಥ್ ರೆಡ್ಡಿ ಮತ್ತು ಉಪಾಧ್ಯಕ್ಷ ಆಗಿ ಶಬೀರ್ ಅಹಮದ್ ಆಯ್ಕೆಯಾದರು.

ಸಿಇಒ ಶಿವಾರೆಡ್ಡಿ ಅವರು ಚುನಾವಣಾಧಿಕಾರಿ ಕಾರ್ಯ ನಿರ್ವಹಿಸಿದರು.

ಅಧ್ಯಕ್ಷ ಮಂಜುನಾಥ್ ರೆಡ್ಡಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ರೇಷ್ಮೆ ಬೆಳೆಗಾರರು ಹಾಗೂ ರೈತರಿಗೆ ಸುಲಲಿತವಾಗಿ ತಲುಪಿಸುತ್ತೇವೆ. ತಾಂತ್ರಿಕ ಮಾರ್ಗದರ್ಶನ, ಮಹಿಳೆಯರಿಗೆ ಸಾಲ ಸೌಲಭ್ಯ ನೀಡುತ್ತೇವೆ ಎಂದು ಹೇಳಿದರು.

ಉಪಾಧ್ಯಕ್ಷ ಶಬೀರ್ ಅಹಮದ್ ಮಾತನಾಡಿ, ‘ನಾನು ಇದೀಗ 3ನೇ ಬಾರಿಗೆ ಉಪಾಧ್ಯಕ್ಷ ಆಗಿ ಆಯ್ಕೆಯಾಗಿದ್ದೇನೆ. ರೇಷ್ಮೆ ಬೆಳೆಗಾರರು ಹಾಗೂ ರೈತರಿಗೆ ಅಗತ್ಯವಿರುವ ಸಾಲ ಸೌಲಭ್ಯ ಒದಗಿಸುತ್ತೇನೆ’ ಎಂದು ಭರವಸೆ ನೀಡಿದರು.

ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ, ಕೆಎಂಎಫ್ ನಿರ್ದೇಶಕ ಕೆ.ಕೆ. ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಪಿ. ಕೃಷ್ಣಾರೆಡ್ಡಿ, ಸೀತಾರಾಮರೆಡ್ಡಿ, ಬೈರರೆಡ್ಡಿ, ಮುನಿವೆಂಕಟಪ್ಪ, ಬಿ.ಎಂ. ಪ್ರಕಾಶ್, ಅಕ್ಬರ್ ಹುಸೇನ್, ತಾಜ್ ಮೌಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-18-2073715162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.