ಕೋಲಾರ: ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯ 119ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೋಲಾರ ನಗರದ ಡೂಮ್ ಲೈಟ್ ವೃತ್ತದಿಂದ ಅಕ್ಕಿ, ಬೆಲ್ಲ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಎರಡು ಲಾರಿಗಳಲ್ಲಿ ವಿವಿಧ ದಿನಸಿ ವಸ್ತುಗಳನ್ನು ದೇಣಿಗೆಯಾಗಿ ಕಳುಹಿಸಿಕೊಡಲಾಯಿತು.

10 ವರ್ಷಗಳಿಂದಲೂ ನಿರಂತರವಾಗಿ ಕೋಲಾರ, ಕಳ್ಳೀಪುರ ಗ್ರಾಮ, ವೇಮಗಲ್, ನರಸಾಪುರ, ರಾಮಸಂದ್ರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿ ಸಾಗಿಸಲಾಗುತ್ತಿದೆ.

ಏ.1 ರಂದು ಶ್ರೀಗಳ ಜನ್ಮದಿನದ ಅಂಗವಾಗಿ ಕೋಲಾರದಿಂದ ತುಮಕೂರಿನ ಮಠಕ್ಕೆ ತೆರಳಲು ವಾಹನ ವ್ಯವಸ್ಥೆಯನ್ನು ಮಾಜಿ ನಗರಸಭೆ ಸದಸ್ಯ ಪ್ರಸಾದ್ ಬಾಬು ಮತ್ತು ಕಳ್ಳೀಪುರ ನಾಗರಾಜ್ ಮಾಡಿದ್ದಾರೆ. ಅವರು ಉಚಿತವಾಗಿ ನೀಡಿದ ಲಾರಿಗಳಲ್ಲಿ ಕೋಲಾರ ಎಪಿಎಂಸಿ ತರಕಾರಿ ಮಂಡಿಗಳಿಂದ ಸಂಗ್ರಹಿಸಿದ ಆರೂವರೆ ಟನ್ ತರಕಾರಿ, 230 ಮೂಟೆ ಬೆಲ್ಲ, 105 ಮೂಟೆ ಅಕ್ಕಿ, ಉಪ್ಪು 510 ಕೆಜಿ ಹೆಸರುಬೇಳೆ , ರವೆ, ಬೇಳೆ ಕಾಳುಗಳನ್ನು ಭಕ್ತರಿಂದ ಸಂಗ್ರಹಿಸಿ ಕಳುಹಿಸಿಕೊಡಲಾಯಿತು. ನಾಲ್ಕು ದಿನಗಳಿಂದ ಭಕ್ತಾದಿಗಳಿಂದ ದವಸ ಸಂಗ್ರಹಿಸಲಾಗಿದೆ.

ಸಿ.ಆರ್.ಶೇಖರ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್, ಕಳ್ಳೀಪುರ ನಟರಾಜ್, ಅಮರನಾಥ್, ಪೊಲೀಸ್ ಬಸವರಾಜ್, ರೇಣುಕಯ್ಯ, ನಗರಸಭಾ ಸದಸ್ಯ ರಾಕೇಶ್, ವಕ್ಕಲೇರಿ ರಾಜಪ್ಪ, ವೆಂಕಟೇಶ್, ಶ್ರೀನಿವಾಸ್, ಮುಳುಬಾಗಿಲು ಶಿವಕುಮಾರ್, ಪವನ್, ಅನಿಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-18-719053586

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.