ಕೋಲಾರ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೋಲಾರ ನಗರ ಹೊರವಲಯದಲ್ಲಿ ಸಹ್ಯಾದ್ರಿ ಕಾಲೇಜು ಬಳಿ ನಿರ್ಮಿಸಿರುವ ಸೌರ ಚಾಲಿತ ಸ್ಮಾರ್ಟ್ ಬಸ್ ತಂಗುದಾಣವನ್ನು ಸಂಸದ ಎಂ.ಮಲ್ಲೇಶ್ ಬಾಬು ಶನಿವಾರ ಉದ್ಘಾಟಿಸಿದರು.

ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಈ ಭಾಗದ ಉದ್ಯೋಗಳು ಮನವಿಗೆ ಸ್ಪಂದಿಸಿ ಸ್ಮಾರ್ಟ್ ಬಸ್ ನಿಲ್ದಾಣವನ್ನು ₹ 9.4 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದೇವೆ. ಜಿಲ್ಲೆಯಲ್ಲಿ ಇನ್ನೂ 15 ಕಡೆ ಇಂತಹ ನಿಲ್ದಾಣ ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ನಿಲ್ದಾಣದಲ್ಲಿ ಮೊಬೈಲ್ ಚಾರ್ಜಿಂಗ್ಗೆ 4 ಪವರ್ ಪಾಯಿಂಟ್ ಇವೆ. ಪೊಲೀಸರೊಂದಿಗೆ ಸಂಪರ್ಕಿಸಲು ವ್ಯವಸ್ಥೆ ಇದೆ ಎಂದು ಅವರು ಹೇಳಿದರು.

ಎಲ್ಪ್ರೋಎನರ್ಜಿ ಸಂಸ್ಥೆ ನಿರ್ದೇಶಕ ನಳಿನ್ ಕನ್ಸಲ್ ಮಾತನಾಡಿ, ‘ಹೆಣ್ಣು ಮಕ್ಕಳ ಸುರಕ್ಷತೆಗೆ ಒತ್ತು ನೀಡಿ ನಿರ್ಮಿತಿ ಕೇಂದ್ರದಿಂದ ಈ ನಿಲ್ದಾಣ ನಿರ್ಮಿಸಲಾಗಿದೆ. ರಾಜದಲ್ಲಿ 500 ಕಡೆ ಇಂತಹ ನಿಲ್ದಾಣ ನಿರ್ಮಿಸಲಾಗುವುದು. ಇಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಇದೆ. ಸಿ.ಸಿ ಕ್ಯಾಮೆರಾ, ಎಲ್ಇಡಿ ಲೈಟಿಂಗ್ ವ್ಯವಸ್ಥೆ ಸೌರ ವ್ಯವಸ್ಥೆಯಿಂದ ನಡೆಯುತ್ತಿದೆ. ನಿಲ್ದಾಣದ ಮೇಲೆ ಸೌರ ಫಲಕ ಅಳವಡಿಸಲಾಗಿದೆ’ ಎಂದರು.

ಸಹ್ಯಾದ್ರಿ ಸಂಸ್ಥೆಯ ಎಂ.ಉದಯಕುಮಾರ್ ಮಾತನಾಡಿ, ‘ಕಾಲೇಜಿನಲ್ಲಿ ಸುಮಾರು 1,400 ವಿದ್ಯಾರ್ಥಿಗಳಿದ್ದು, ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡದಂತಾಗಿದೆ. ಈ ಭಾಗದಲ್ಲಿ ಸುಸಜ್ಜಿತ ಬಸ್ ತಂಗುದಾಣ ಅವಶ್ಯವಿತ್ತು. ನಮ್ಮ ಮನವಿಗೆ ಸ್ಪಂದಿಸಿ ಹೈಬ್ರಿಡ್ ಪರಿಕಲ್ಪನೆಯಲ್ಲಿ ಸಂಸದರು ರಾಜ್ಯದಲ್ಲೇ ಗ್ರಾಮೀಣ ಭಾಗದ ಮೊದಲ ಸ್ಮಾರ್ಟ್ ನಿಲ್ದಾಣ ನಿರ್ಮಿಸಿಕೊಟ್ಟಿದ್ದಾರೆ’ ಎಂದರು.

ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್, ‘ಜಿಲ್ಲೆಯ ವಿಶೇಷಗಳಾದ ಚಿನ್ನದ ಗಣಿ, ಮಾವು, ಹೈನುಗಾರಿಕೆ ವಿಚಾರಗಳನ್ನು ಈ ಬಸ್ ತಂಗುದಾಣದಲ್ಲಿ ಬಿಂಬಿಸಲಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯರಾದ ಮುರಳಿಗೌಡ, ರಾಕೇಶ್, ವೇಮಗಲ್ ಪಟ್ಟಣ ಪಂಚಾಯಿತಿ ಸದಸ್ಯ ಲೋಕೇಶ್ ಮರಿಯಪ್ಪ, ಛತ್ರಕೋಡಿಹಳ್ಳಿ ಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ನಾಮಾಲ್ ಮಂಜು, ಸಹ್ಯಾದ್ರಿ ಪ್ರಾಂಶುಪಾಲ ವಿನಯ್ ಗಂಗಾಧರ್, ಪದವಿ ಕಾಲೇಜು ಪ್ರಾಂಶುಪಾಲ ಬದ್ರಿನಾಥ್ ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-18-1511177637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.