ಕೋಲಾರ: ಆತ್ಮಸಾಕ್ಷಿ, ಆತ್ಮಪ್ರಜ್ಞೆ ಎಚ್ಚರಿಸುವ ಅಭಿಯಾನ ಹಾಗೂ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಅರಿವು ಭಾರತ ಸಂಸ್ಥೆ ಕೂಡ ಆ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.

ಅರಿವು ಭಾರತ ಸಂಸ್ಥೆ ಆಶ್ರಯದಲ್ಲಿ ‘ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಶೀರ್ಷಿಕೆಯಡಿ ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ ಸೋಮಸುಂದರ ರೆಡ್ಡಿ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು ಯಾರೂ ಸಮಾಜ ತಿದ್ದಲು, ಸಮಾಜ ಸುಧಾರಣೆ ಮಾಡಲು ಹುಟ್ಟಿಲ್ಲ. ನಾವು ಹುಟ್ಟಿರುವುದು ನಮ್ಮನ್ನು ಸುಧಾರಣೆ ಮಾಡಿಕೊಂಡು ಸಮಾಜದಲ್ಲಿ ಬದುಕಲು. ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ, ಸಾಮರಸ್ಯ ಹಾಗೂ ಗೌರವದಿಂದ ಬದುಕಲು ನಮ್ಮೊಳಗಿರುವ ಕಲ್ಮಶಗಳನ್ನು ಹೊರಹಾಕಿ ಅಂಕುಡೊಂಕುಗಳನ್ನು ತಿದ್ದಿಕೊಳ್ಳಬೇಕು ಎಂದರು.

ಅರಿವು ಭಾರತ ಎಂಬುದು ಕೇವಲ ಸ್ವಾಭಿಮಾನದ ಚಳವಳಿ ಅಲ್ಲ, ಆತ್ಮಗೌರವದ ಅಭಿಯಾನ ಅಲ್ಲ; ಇದು ಆತ್ಮಸಾಕ್ಷಿಯ ಅಭಿಯಾನ. ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಸಾಕ್ಷಿ, ಮನಃಸಾಕ್ಷಿ ಎಂಬುದಿದೆ. ಈ ಹೋರಾಟ ಪ್ರತಿಯೊಬ್ಬರ ಆತ್ಮಸಾಕ್ಷಿ ಎಚ್ಚರಿಸುವ ಅಭಿಯಾನ. ಇದು ಆತ್ಮಾವಲೋಕನ ಸಭೆ ಕೂಡ ಎಂದು ಹೇಳಿದರು.

ಜಾತಿ ವಿನಾಶದ ಎಲ್ಲಾ ಅಭಿಯಾನಗಳು ಕೂಡ ಸ್ವಾಭಿಮಾನದ ಸಂಕೇತವೇ. ಆದರೆ, ಅರಿವು ಭಾರತ ಅಭಿಯಾನ ಏಕೆ ಭಿನ್ನವಾಗಿದೆ ಎಂದರೆ ಅದು ಆತ್ಮಸಾಕ್ಷಿ ಎಚ್ಚರಿಸುತ್ತಿದೆ. ಸಮಾಜದಲ್ಲಿ ಸಾಕಷ್ಟು ನ್ಯೂನತೆಗಳಿವೆ, ಮನುಷ್ಯರನ್ನು ಮನುಷ್ಯರೇ ಅಮಾನಿಸುತ್ತಿದ್ದಾರೆ ಎಂಬ ಪಾಪಪ್ರಜ್ಞೆ ಯಾರಲ್ಲಿ ಇದೆಯೋ, ಇಂಥ ಸಮಸ್ಯೆಗಳು ದೂರವಾಗಬೇಕು ಎಂಬ ಸಂವೇದನೆ ಯಾರಲ್ಲಿ ಇದೆಯೋ ಅಂಥವರೆಲ್ಲಾ ಸೇರಿಕೊಂಡು ನಡೆಸುತ್ತಿರುವ ಅಭಿಯಾನ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರೀತಿ ಯಾವಾಗಲೂ ಪ್ರೀತಿ ಹುಟ್ಟುಹಾಕುತ್ತದೆ, ದ್ವೇಷ ದೇಷವನ್ನೇ ಬೆಳೆಸುತ್ತದೆ. ಅರಿವು ಭಾರತದ್ದು ಪ್ರೀತಿಯ ಪ್ರಯಾಣ, ಒಬ್ಬರನ್ನೊಬ್ಬರು ಗೌರವಿಸುವ ಪ್ರಯಾಣ. ಪ್ರೀತಿ ಎಲ್ಲರಲ್ಲೂ ಇರುತ್ತದೆ ಆದರೆ ವ್ಯಕ್ತಪಡಿಸುವ ರೀತಿ ಗೊತ್ತಾಗುತ್ತಿಲ್ಲ ಎಂದರು.

ಕೋಲಾರ ಜಿಲ್ಲೆಯ ಯಾವುದೇ ಗ್ರಾಮ ಅಸ್ಪೃಶ್ಯಮುಕ್ತವಾಗಿಲ್ಲ. ಅಸ್ಪೃಶ್ಯ ಮುಕ್ತ ಗ್ರಾಮವೆಂದು ಯಾರೂ ಘೋಷಣೆ ಮಾಡಲು ಸಾಧ್ಯವಿಲ್ಲ. ಒಂದು ಮನೆಯಲ್ಲಿ ಬದಲಾವಣೆಯಾದರೆ ಪ್ರಯೋಜನವಿಲ್ಲ. ಇಡೀ ಗ್ರಾಮವೇ ಬದಲಾಗಬೇಕು ಎಂದು ಹೇಳಿದರು.

ವಿಷಜಂತುಗಳು, ವದಂತಿಗಳು ಬೇಗನೇ ಹರಡುತ್ತವೆ. ಒಳ್ಳೆಯ ಸಂಗತಿಗಳು ಬೇಗನೇ ಹರಡುವುದಿಲ್ಲ. ಅದಕ್ಕೆ ದೊಡ್ಡಮಟ್ಟದ ಪ್ರಯತ್ನ ಬೇಕಾಗುತ್ತದೆ. ಅದಕ್ಕೆ ಶಕ್ತಿ, ವೇಗ ಕೊಡಲು ಸಮಾನ ಮನಸ್ಕರು ಬೇಕು ಎಂದರು.

ನಾನು ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯಾಗಿ ಬಂದಿಲ್ಲ. ಮನುಷ್ಯ ಪ್ರೇಮದಲ್ಲಿ ನಂಬಿಕೆ ಇಟ್ಟು, ಸಮಾಜದಲ್ಲಿ ಸಮಾನತೆ ತರಲು ಯಾರೆಲ್ಲಾ ಪ್ರಯತ್ನ ಹಾಕುತ್ತಿದ್ದಾರೆ ಅವರಿಗೆ ಬೆಂಬಲ ನೀಡಲು ಬಂದಿದ್ದೇನೆ ಎಂದು ನುಡಿದರು.

ನಮ್ಮ ಶಿಕ್ಷಣ ನಮ್ಮನ್ನು ಜಾಗೃತರನ್ನಾಗಿ ಮಾಡಲಿಲ್ಲ, ಮಾನವಂತರನ್ನಾಗಿ ಬೆಳೆಸಲಿಲ್ಲ, ನಮ್ಮಲ್ಲಿ ಹೃದಯವಂತಿಕೆ ಬೆಳೆಸಲಿಲ್ಲ. ಹೀಗಾಗಿ ಶಿಕ್ಷಣ ಹೊಟ್ಟೆಪಾಡಿಗೆ, ಪ್ರಮಾಣಪತ್ರಕ್ಕಾಗಿ, ಪದವಿಗೆ ಎಂಬಂಥ ಮಾತುಗಳು ಕೇಳಿಬರುತ್ತಿದೆ. ಆದರೆ, ಸಮಾಜ ಕಲಿಸಿಕೊಡುತ್ತಿದ್ದು, ಅತಿದೊಡ್ಡ ವಿಶ್ವವಿದ್ಯಾಲಯವಾಗಿದೆ ಎಂದರು.

ವಿದ್ಯೆ, ಅಧಿಕಾರಿ, ಹಣ, ಶ್ರೀಮಂತಿಕೆ ಎಲ್ಲವೂ ಬಂತು; ಆದರೆ ಮನುಷ್ಯತ್ವ ಬರಲೇ ಇಲ್ಲ. ಜಾತಿ ಎನ್ನುವುದು ಭೌತಿಕವಾಗಿ ದೂರವಾಗಿರಬಹುದು; ಆದರೆ ಮನಸ್ಸಿನ ಒಳಗಡೆ ಆಳವಾಗಿ ತಳವೂರಿದೆ. ಎಲ್ಲರನ್ನೂ ಜಾತಿ ಮೇಲೆ ಅಳೆಯಲಾಗುತ್ತಿದೆ. ಇದು ತೀರ ಸಣ್ಣತನದ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಸೋಮಸುಂದರ ರೆಡ್ಡಿ ಹಾಗೂ ದಂಪತಿಗೆ ಗ್ರಾಮರತ್ನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು. ತಹಶೀಲ್ದಾರ್ ಭರತ್, ಡಿವೈಎಸ್ಪಿ ಲಕ್ಷ್ಮಯ್ಯ, ಸಂಸ್ಥೆಯ ಅರಿವು ಶಿವಪ್ಪ, ದಲಿತ ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಬೆಳಕು ಸಂಸ್ಥೆಯ ರಾಧಾಮಣಿ, ನಿರೂಪಕಿ ಮಂಜುಳಾ ಕೊಂಡರಾಜನಹಳ್ಳಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-18-1703181445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.