ಕೋಲಾರ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರನ್ನು ವರ್ಗಾಯಿಸಬೇಕು, ಇಲಾಖೆಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಮಾದಿಗ ಮಾದರ ಸಂಘಟನೆಯ ರಾಜ್ಯ ಅಧ್ಯಕ್ಷ ಹಾರೋಹಳ್ಳಿ ರಮೇಶ್ ಆಗ್ರಹಿಸಿದ್ದಾರೆ.

ನಗರದಲ್ಲಿ ಎಸ್ಸಿ ಕಾಲೊನಿ ಹಾರೋಹಳ್ಳಿಯಲ್ಲಿ ಹೈಮಾಸ್ಟ್ ದೀಪವನ್ನು ಅಳವಡಿಸಲು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅನುದಾನ ನೀಡಿದ್ದಾರೆ. ಆದರೆ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಶ್ರೀನಿವಾಸನ್, ಮಾದಿಗ ಕಾಲೊನಿ ಬಿಟ್ಟು ಹೌಸಿಂಗ್ ಬೋರ್ಡ್ನಲ್ಲಿ ಅಳವಡಿಸಲು ಆದೇಶ ನೀಡಿರುತ್ತಾರೆ. ಇದು ಖಂಡನೀಯ. ಅದೇ ರೀತಿ ಜಂಟಿ ನಿರ್ದೇಶಕರ ಕಚೇರಿ ದುರಸ್ತಿಪಡಿಸಿದ್ದು ಅದಕ್ಕೆ ವೆಚ್ಚ ಮಾಡಿರುವ ಹಣದ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಜಿಲ್ಲೆಯ ಎಲ್ಲಾ ವಾರ್ಡನ್ಗಳು, ಕಾಲೇಜುಗಳ ಪ್ರಾಂಶುಪಾಲರು ಸ್ವಲ್ಪ ಸ್ವಲ್ಪ ಹಣ ನೀಡಿರುತ್ತಾರೆ ಎಂಬುದಾಗಿ ಹೇಳುತ್ತಾರೆ. ಇದು ಲಂಚವಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ದಲಿತ ಕಾಲೊನಿಗಳಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳು, ಚರಂಡಿಗಳು, ಹಾಸ್ಟೆಲ್ ದುರಸ್ತಿಗಳನ್ನು ಲೋಕಾಯುಕ್ತರು ಗುಣಮಟ್ಟ ಪ್ರಮಾಣ ಪರಿಶೀಲಿಸಬೇಕು, ಯಾವ ಯಾವ ಅನುದಾನಗಳಲ್ಲಿ ಕಾಮಗಾರಿಗಳು ನಡೆದಿದೆ ಎಂದು ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವರು ಈ ಕೂಡಲೇ ಜಂಟಿ ನಿರ್ದೇಶಕರು ವಜಾಗೊಳಿಸಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಕಾಯಂ ಅಧಿಕಾರಿಯನ್ನು ನೇಮಕ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಗೆ ಕಾಯಂ ಕಚೇರಿ ಇಲ್ಲದೆ ಭವನಗಳಲ್ಲಿ ಮತ್ತು ಹಾಸ್ಟೆಲ್ಗಳಲ್ಲಿ ಕಚೇರಿ ನಡೆಸಲಾಗುತ್ತಿದೆ. ಈ ಬಗ್ಗೆ ಗಮನಹರಿಸಿ ದಲಿತ ಹಕ್ಕುಗಳನ್ನ ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-18-2051200021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.