ಕೋಲಾರ: ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಗವಿಕಲರಿಗೆ ಉಚಿತ ಚಿಕಿತ್ಸೆ, ವಿಶೇಷ ಚಿಕಿತ್ಸಾ ಕೊಠಡಿ, ರ್ಯಾಂಪ್ ಮತ್ತು ಆದ್ಯತೆಯ ಸೇವೆ ನೀಡಲಾಗುತ್ತಿದೆ. ಆದರೆ, ಇಲ್ಲೊಂದು ಆಸ್ಪತ್ರೆಯನ್ನು ಕೇವಲ ಅಂಗವಿಕಲರ ಚಿಕಿತ್ಸೆಗಾಗಿಯೇ ಪ್ರತ್ಯೇಕವಾಗಿ ಮೀಸಲಿಡಲಾಗಿದೆ.

ಕೋಲಾರ ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ಫೂಲ್ ಷಾ ಮೊಹಲ್ಲಾದಲ್ಲಿ ‘ವಿಶೇಷ ಚೇತನರ ಪ್ರಾಥಮಿಕ ಆರೋಗ್ಯ ಕೇಂದ್ರ’ ನಿರ್ಮಿಸಲಾಗಿದೆ.

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಹಂತ 4ರಲ್ಲಿನ ಅಂಗವಿಕಲರ ಅನುದಾನ ಸುಮಾರು ₹ 80 ಲಕ್ಷ ವೆಚ್ಚದಲ್ಲಿ ಈ ವಿಶೇಷ ಆಸ್ಪತ್ರೆ ನಿರ್ಮಿಸಲಾಗಿದೆ. ಅಂಗವಿಕಲ ಸ್ನೇಹಿ ಶೌಚಾಲಯ, ರ್ಯಾಂಪ್ ಹಾಗೂ ಇನ್ನಿತರ ವ್ಯವಸ್ಥೆ ಹೊಂದಿದೆ. ಪ್ರಯೋಗಾಲಯ, ಎರಡು ಮಂಚ, ಒಂದು ಹಾಲ್, ಒಂದು ವೈದ್ಯರ ಕೊಠಡಿ ಈ ಕಟ್ಟಡದಲ್ಲಿವೆ. ನಗರಸಭೆಯ ಜಾಗ ಇದಾಗಿದ್ದು, ಡೇ ಕೇರ್ ಕ್ಲಿನಿಕ್ ರೀತಿ ಕಾರ್ಯನಿರ್ವಹಿಸಲಿದೆ.

‘ವಿಶೇಷ ಚೇತನರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು. ಆರೋಗ್ಯ ಇಲಾಖೆಯವರು ಸಿಬ್ಬಂದಿ ನಿಯೋಜಿಸಿ, ನಿರ್ವಹಣೆ ಮಾಡುತ್ತಾರೆ’ ಎಂದು ಕೋಲಾರ ನಗರಸಭೆ ಆಯುಕ್ತ ನವೀನ್ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷವಾಗಿ ಅಂಗವಿಕಲರ ಚಿಕಿತ್ಸೆಗಾಗಿಯೇ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ನಗರಸಭೆಯಿಂದ ಈ ಯೋಜನೆ ಸಾಕಾರಗೊಳಿಸಿದ್ದಾರೆ. ಈಚೆಗೆ ಈ ಆಸ್ಪತ್ರೆಯನ್ನು ನಿರ್ಮಿಸಿ ಉದ್ಘಾಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.