ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಈಚೆಗೆ ಸರಣಿ ಕಳ್ಳತನವೆಸಗಿ ಕುರಿ, ಮೇಕೆ ಕದ್ದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಂತರ ಜಿಲ್ಲಾ ಆರೋಪಿಗಳಿಂದ ₹ 3 ಲಕ್ಷ ಬೆಲೆ ಬಾಳುವ 37 ಕುರಿ ಹಾಗೂ 2 ಮೇಕೆಗಳನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರಿನ ಅಜ್ಜಿಹಳ್ಳಿಯ ಕೆಂಪರಾಜು (22), ಮೇಲುಕೋಟೆಯ ಪ್ರಶಾಂತ್ (20) ಹಾಗೂ ಗಟ್ಟಗೊಲ್ಲಹಳ್ಳಿಯ ಹನುಮಂತ (24) ಬಂಧಿತ ಆರೋಪಿಗಳು.

ಶ್ರೀನಿವಾಸಪುರ ಪೊಲೀಸ್ ಠಾಣೆ ಹಾಗೂ ಗೌನಪಲ್ಲಿ ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಮಾರ್ಚ್ 14ರಂದು ಪ್ರಕರಣ ದಾಖಲಾಗಿತ್ತು.

ನಾಗದೇವಪಲ್ಲಿ ಗ್ರಾಮದ ರಮೇಶ್ ಎಂಬುವರಿಗೆ ಸೇರಿದ 5 ಕುರಿಗಳು, ಆರ್ ತಿಮ್ಮಸಂದ್ರ ಗ್ರಾಮದ ಗೋವಿಂದಪ್ಪ ಎಂಬುವರಿಗೆ ಸೇರಿದ 16 ಕುರಿಗಳು, ದೊಡ್ಡಪ್ಪಲ್ಲಿ ಗ್ರಾಮದ ವೆಂಕಟೇಶಪ್ಪ ಎಂಬುವರಿಗೆ ಸೇರಿದ 21 ಕುರಿಗಳು, ಆಲಂಬಗಿರಿ ಗ್ರಾಮದ ರಾಮಚಂದ್ರ ಎಂಬುವರಿಗೆ ಸೇರಿದ 8 ಕುರಿಗಳು, ನಂಬಿಹಳ್ಳಿ ಗ್ರಾಮದ ಗಣೇಶ್ ಮತ್ತು ನಾಗರಾಜ್ ಅವರಿಗೆ ಸೇರಿದ ಮೇಕೆಗಳು, ಕಳ್ಳೂರು ಗ್ರಾಮದ ಇಲ್ಲಿನ ನಿವಾಸಿಯೊಬ್ಬರ 3 ಹುಂಜಗಳನ್ನು ಕಳ್ಳರು ಈಚೆಗೆ ಕದ್ದೊಯ್ದಿದ್ದ ಸಂಬಂಧ ದೂರು ದಾಖಲಾಗಿತ್ತು.

ಕುರಿ, ಮೇಲೆ ಕದ್ದ ಮೇಲೆ ತಮ್ಮನ್ನು ಯಾರೂ ಬೆನ್ನಟ್ಟಬಾರದೆಂಬ ಸಂಚಿನಿಂದ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ವೈರ್ ಕತ್ತರಿಸಿರುವ ಕಳ್ಳರು, ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಈ ವಿನೂತನ ಮಾದರಿಯ ಕಳ್ಳತನದಿಂದ ರೈತರು ಕಂಗಾಲಾಗಿದ್ದರು.

ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದರು. 150ಕ್ಕೂ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಎಎಸ್ಪಿಗಳಾದ ರವಿಶಂಕರ್, ಜಗದೀಶ್ ಸಹಕಾರದಲ್ಲಿ ಡಿವೈಎಸ್ಪಿ ಮನಿಷಾ, ಇನ್ಸ್ಪೆಕ್ಟರ್ ಶಂಕರಾಚಾರ್, ಪಿಎಸ್ಐ ಜಯರಾಂ, ಎಎಸ್ಐ ಸುಬ್ಬಾರೆಡ್ಡಿ, ಸಿಬ್ಬಂದಿ ನಾಗರಾಜ, ಆನಂದಕುಮಾರ್, ಗುರುಪ್ರಸಾದ್, ಸಂತೋಷ್ ಕುಮಾರ್, ಅಂಬರೀಷ್, ನಾರಾಯಣಸ್ವಾಮಿ, ಮುರಳಿ, ಶ್ರೀನಾಥ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಈ ತಂಡವನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-18-1070930755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.