ಶ್ರೀನಿವಾಸಪುರ: ಪಟ್ಟಣದ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ವಾಸವಿ ಜಯಂತಿ ಅಂಗವಾಗಿ ದೇವಿಯ ಉತ್ಸವ ಮೂರ್ತಿಯ ಪಲ್ಲಕಿ ಉತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಉತ್ಸವ ಮೂರ್ತಿ ಮೆರವಣಿಗೆ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಮಕ್ಕಳಿಂದ ವಾಸವಿ ಮಾತೆಯ ವೇಷಭೂಷಣ ಪ್ರದರ್ಶನ ಏರ್ಪಡಿಸಲಾಗಿತ್ತು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಮಾತನಾಡಿ, ‘ದೇಶದ ಆರ್ಥಿಕಾಭಿವೃದ್ದಿಯಲ್ಲಿ ವೈಶ್ಯ ಸಮುದಾಯದ ಪಾತ್ರ ಹಿರಿದು. ಯಾವುದೇ ವಿವಾದಗಳಿಗೆ ಎಡೆಗೊಡದೆ, ತಮ್ಮ ವೃತ್ತಿಯಲ್ಲಿ ನಿರತರಾಗಿರುವುದು ಮಾದರಿ ನಡೆಯಾಗಿದೆ. ಅಹಿಂಸೆ ಹಾಗೂ ಸಾಮಾಜಿಕ ಹೊಂದಾಣಿಕೆ ಅವರ ವಿಶೇಷ ಗುಣವಾಗಿದೆ’ ಎಂದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಆರ್ಯವೈಶ್ಯ ಸಮಾಜ ಶಿಸ್ತು ಮತ್ತು ಸಂಯಮಕ್ಕೆ ಹೆಸರಾಗಿದೆ. ದುಡಿಮೆ ಮತ್ತು ಲೆಕ್ಕಾಚಾರಕ್ಕೆ ಮಾದರಿಯಾಗಿದೆ, ಸಮಾಜದ ಎಲ್ಲ ಸಮುದಾಯಗಳ ಗೌರಕ್ಕೆ ಪಾತ್ರರಾಗಿದೆ’ ಎಂದು ಹೇಳಿದರು.

ಮುಖಂಡರಾದ ಬಿ.ವಿ.ಶಿವಾರೆಡ್ಡಿ, ತೂಪಲ್ಲಿ ನಾರಾಯಣಸ್ವಾಮಿ, ಶ್ರೀನಿವಾಸಪ್ಪ, ಆರ್ಯವೈಶ್ಯ ಮಂಡಳಿ ಮುಖಂಡರಾದ ಎಸ್.ಬಿ.ಅಮರನಾಥ್, ವೈಆರ್ಎಸ್ ಪ್ರಕಾಶ್, ಸೂರ್ಯನಾರಾಯಣಶೆಟ್ಟಿ, ಬದ್ರಿ, ಸಂಜಯ್, ಮ್ಯಾಂಗೋವ್ಯಾಲಿ ಅಮರನಾಥ್, ಸತ್ಯನಾರಾಯಣಶೆಟ್ಟಿ, ಅಂಜನಾದ್ರಿ, ನಾಗರಾಜ್, ಸೀತಾರಾಂ ಹಾಗೂ ಸಮುದಾಯದವರು ಇದ್ದರು.

ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಶನಿವಾರ ಕನ್ಯಕಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-18-668581506

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.