ಬೇತಮಂಗಲ: ಸಮೀಪದ ಸುಂದರಪಾಳ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 1988-89ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಭಾನುವಾರ ಜರುಗಿತು.

37 ವರ್ಷಗಳ ನಂತರ ಒಂದೆಡೆ ಸೇರಿದ್ದ ಸ್ನೇಹಿತರು ಶಾಲಾ ದಿನಗಳನ್ನು ನೆನಪು ಹಾಕುತ್ತಾ, ಅಕ್ಷರ ಕಲಿಸಿದ ಗುರುಗಳನ್ನು ಸತ್ಕರಿಸಿದರು.

ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಗೋಪಿನಾಥ್ ಮಾತನಾಡಿ, ಒಂದು ಕಾಲದಲ್ಲಿ ಸುಂದರಪಾಳ್ಯ ಪ್ರೌಢಶಾಲೆಗೆ ಸರ್ಕಾರದಿಂದ ಯಾವುದೇ ಜಾಗ ಮಂಜೂರಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಪ್ರಯತ್ನಿಸಿ ಖಾಸಗಿ ಜಾಗವನ್ನು ಖರೀದಿಸಿದ್ದರು. ಅದರ ಫಲ ಇಂದು ಇಲ್ಲಿ ಬೃಹತ್ ಶಾಲಾ-ಕಾಲೇಜು ತಲೆಎತ್ತಿದೆ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುತ್ತಿದೆ ಎಂದರು.

ಈ ವೇಳೆ ಮೃತರಾಗಿದ್ದ ನಿವೃತ್ತ ಶಿಕ್ಷಕರಾದ ಸುಬ್ಬಣ್ಣ, ವೀರಭದ್ರಯ್ಯ ಹಾಗೂ 1988-89ನೇ ಸಾಲಿನ ಬ್ಯಾಚ್ನಲ್ಲಿ ಅಗಲಿದ ಸಹಪಾಠಿಗಳ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು.

ಶ್ರೀಧರ್, ಭಾಸ್ಕರ್ ಗೌಡ, ಉಮಾದೇವಿ, ಶಾಂತಮ್ಮ, ಶಿವಣ್ಣ, ಶ್ರೀನಿವಾಸ್ ಗೌಡ, ಜಯಲಕ್ಷ್ಮಿ, ವೆಂಗಸಂದ್ರ ವೆಂಕಟಾಚಲಪತಿ, ಶ್ರೀನಿವಾಸ್ ಮೂರ್ತಿ, ತಾಯಲೂರಪ್ಪ, ಶ್ರೀರಾಮ್, ರಾಧ, ವೆಂಕಟೇಶ್ ಸೇರಿದಂತೆ ಹಳೆ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-18-496032814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.