ಕೋಲಾರ: ಕೋಟಿ ವೃಕ್ಷ ಬೆಳೆಸುವ ಯೋಜನೆ ಏನಾಯಿತು? ಸಸಿ ಕೊಡುವ, ಸಸಿ ನೆಡುವ ಕಾರ್ಯಕ್ರಮ ಫ್ಯಾಷನ್ ಆಗಿದೆಯೇ? ನೆಟ್ಟ ಎಷ್ಟು ಸಸಿಗಳು ಗಿಡವಾಗಿ, ಹೆಮ್ಮರವಾಗಿ ಬೆಳೆದಿವೆ ಎಂಬ ವೈಜ್ಞಾನಿಕ ಅವಲೋಕನವನ್ನೇ ಮಾಡುತ್ತಿಲ್ಲ. ಬದಲಾಗಿ ಗಿಡ ಬೆಳೆಸುವ ವಿಚಾರ ಇಟ್ಟುಕೊಂಡೇ ಎಷ್ಟೋ ದಿನ ಬದುಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮನ್ವಂತರ ಮಾಧ್ಯಮ ಕೌಶಲಾಭಿವೃದ್ಧಿ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ 'ಜಾಗತಿಕ ತಾಪಮಾನ' ಕುರಿತ ಸಂವಾದ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ರಕ್ಷಣೆ ಎನ್ನುವುದು ಕೇವಲ ತೋರಿಕೆಯ ಫ್ಯಾಷನ್ ಆಗಬಾರದು. ನಾವು ನೆಡುವ ಪ್ರತಿ ಸಸಿಯೂ ಮರವಾಗಿ ಬೆಳೆಯುವವರೆಗೆ ಅದರ ಜವಾಬ್ದಾರಿ ನಮ್ಮದಾಗಿರಬೇಕು. ಪ್ರತಿಯೊಬ್ಬ ಮನುಷ್ಯ ನಿಸರ್ಗದೊಂದಿಗೆ ಹೇಗೆ ಅನುಸಂಧಾನ ಮಾಡಬೇಕು ಎಂಬುದನ್ನು ಸಣ್ಣ ಮಕ್ಕಳಿಂದಲೇ ಕಲಿಸಬೇಕು. ಮಕ್ಕಳನ್ನು ವಿದ್ಯಾವಂತರಾಗಿ ಮಾಡುತ್ತಿದ್ದು, ಅವರನ್ನು ಬುದ್ಧಿವಂತರಾಗಿಯೂ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಕ್ಷರವಂತರಿಗಿಂತ ಪ್ರಜ್ಞಾವಂತರ ಅಗತ್ಯವಿದೆ. ಮೊದಲು ನಮ್ಮ ಮನಸ್ಥಿತಿ ಸರಿ ಹೋಗಬೇಕಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ನಿಂದ 40 ಡಿಗ್ರಿ ಸೆಲ್ಸಿಯರ್ವರೆಗೆ ಏರಿಕೆಯಾಗಿದೆ. ಜಾಗತಿಕ ತಾಪಮಾನ ಏರಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳು ಒಂದು ಸಮಗ್ರ ವಿಧಾನವನ್ನು ಅನುಸರಿಸಬೇಕು. ಆಗ ಮಾತ್ರ ಇದನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದು ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ‘ಜಾಗತಿಕ ತಾಪಮಾನವು ನಿಸರ್ಗ ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬೆಂಗಳೂರಿನಲ್ಲಿ ಭಯದಿಂದ ಬದುಕುವ ಪರಿಸ್ಥಿತಿ ಬಂದೊದಗಿದೆ. ನೂರೆಂಟು ಕೆರೆಗಳು ಮಾಯವಾಗಿ ಬಡಾವಣೆ ನಿರ್ಮಾಣವಾಗಿದೆ’ ಎಂದರು.

ಜನಸಂಖ್ಯೆಯ ಶೇ 60ರಷ್ಟು ಮಂದಿ ಯುವಜನರಿದ್ದಾರೆ. ಯುವ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಪರಿಸರ ಉಳಿಯಲ್ಲ. ಹೆಜ್ಜೆಹೆಜ್ಜೆಗೂ ಗಿಡಮರ ಬೆಳೆಯಬೇಕು. ಆಗ ಮಾತ್ರ ಪರಿಸರ ಉಳಿಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಮಲೆನಾಡಿನಂತಹ ಪ್ರದೇಶಗಳಲ್ಲೂ ಉಷ್ಣಾಂಶ ಏರಿಕೆಯಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಪ್ರಕೃತಿ ಉಳಿಸದಿದ್ದರೆ ಮುಂದಿನ ಪೀಳಿಗೆಗೆಆಮ್ಲಜನಕಕ್ಕೂ ಮಾಸ್ಕ್ ಹಾಕುವ ಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.

ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ‘ಜಾಗತಿಕ ತಾಪಮಾನ ಒಂದುದೇಶದ ಸಮಸ್ಯೆಯಾಗಿರದೆ ಇಡೀ ಭೂಮಂಡಲದ ಸಮಸ್ಯೆಯಾಗಿ ಪರಿಣಮಿಸಿದೆ. ಜಾಗತಿಕ ತಾಪಮಾನದ ದುಷ್ಪರಿಣಾಮಗಳನ್ನು ಊಹೆ ಮಾಡಿಕೊಳ್ಳಲೂ ಸಾಧ್ಯವಾಗಿಲ್ಲ. ಹಸಿರೀಕರಣ ಅಥವಾ ಅರಣ್ಯೀಕರಣ ಜಾಗತಿಕವಾಗಿ ಒಂದು ಆಂದೋಲನವಾಗಬೇಕು’ ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಾ.ಶ್ರೀ.ಅನಂತರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90 ಅಂಕ ಗಳಿಸಿದ ಅಂಗವಿಕಲ ವಿದ್ಯಾರ್ಥಿ ಕೆ.ಸಿ.ಚರಣ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಸಿ ವಿತರಿಸಲಾಯಿತು.

ಮನ್ವಂತರ ಪ್ರಕಾಶನದ ಗೌರವ ಅಧ್ಯಕ್ಷ ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ, ಉಪಾಧ್ಯಕ್ಷ ಎಸ್ ರವಿಕುಮಾರ್, ಕಾರ್ಯದರ್ಶಿ ಶಮ್ಗಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಉಪನ್ಯಾಸಕ ಹರೀಶ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಸುರೇಶ್, ಗಮನ ಸಂಸ್ಥೆಯ ಶಾಂತಮ್ಮ, ಮಂಜುನಾಥ್, ಮಾಮಿ ಪ್ರಕಾಶ್, ಎಂ.ಮುರಳಿ, ಸ್ಫೂರ್ತಿ, ಮಹಿಳಾ ಸಂಚಾಲಕಿ ಮಂಜುಳಾ ಸಿ.ವಿ.ನಾಗರಾಜ್, ತಿರುಮಲೇಶ್, ಸತೀಶ್ ಗೌಡ, ರೇಷ್ಮೆ ಇಲಾಖೆ ಉಪನಿರ್ದೇಶಕ ಆಂಜನೇಯ ರೆಡ್ಡಿ, ಮನ್ವಂತರ ಮಾಧ್ಯಮ ತಂಡದ ಆಸಿಫ್ ಪಾಷ, ರೈತ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಂಜುಳಾ ಕೊಂಡರಾಜನಹಳ್ಳಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-18-1083186762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.