ಕೋಲಾರ: ಜಿಲ್ಲೆಯಾದ್ಯಂತ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದ ವಿವಿಧ ತರಕಾರಿ ಮಾದರಿಗಳ ತಪಾಸಣಾ ವರದಿ ಬಂದಿದ್ದು, ಎಲ್ಲಾ ತರಕಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಎಂದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಎಂ.ಆರ್.ರವಿ ನಿರ್ದೇಶನದ ಮೇರೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಈ ಕ್ರಮ ವಹಿಸಿದ್ದರು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಹಾಗೂ ಜಿಲ್ಲಾಡಳಿತದ ಆದೇಶದನ್ವಯ, ಜಿಲ್ಲೆಯ ಅಂಕಿತ ಅಧಿಕಾರಿ ಡಾ,ರಾಕೇಶ್ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ತಂಡದೊಂದಿಗೆ ಮಾರ್ಚ್ 24ರಂದು ಕೋಲಾರ ಎಪಿಎಂಸಿ ಮಾರುಕಟ್ಟೆ ತರಕಾರಿ ಮಾದರಿ ಪಡೆದಿದ್ದರು.

ಒಟ್ಟು 6 ತರಕಾರಿ ಮಾದರಿಗಳನ್ನು ಸಂಗ್ರಹಿಸಿದ್ದರು. ಜಿಲ್ಲಾದ್ಯಂತ ಬೆಳೆಯಲಾದ ಈ ತರಕಾರಿ ಮಾದರಿಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಬೆಂಗಳೂರಿನ ಸಾರ್ವಜನಿಕ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಪ್ರಯೋಗಾಲಯಕ್ಕೆ ಕಳುಹಿ ಸಲಾದ ಒಟ್ಟು 6 ಮಾದರಿ ಹಾಗೂ ಫಲಿತಾಂಶದ ವಿವರ ಇಂತಿದೆ:

l ಕೋಲಾರ ತಾಲೂಕು (ನರಸಾಪುರ ಹೋಬಳಿ), ದೊಣ್ಣೆ ಮೆಣಸಿನಕಾಯಿ (Capsicum) ಗುಣಮಟ್ಟದಿಂದ ಕೂಡಿದೆ.

l ಮುಳಬಾಗಿಲು ತಾಲೂಕು (ಬೈರಕೂರು ಹೋಬಳಿ), ನವಿಲುಕೋಸು (Knol knol / Turnip) ಗುಣಮಟ್ಟದಿಂದ ಕೂಡಿದೆ.

l ಮುಳಬಾಗಿಲು ತಾಲೂಕು (ನಂಗಲಿ), ಹೀರೆಕಾಯಿ (Ridge gourd) ಗುಣಮಟ್ಟದಿಂದ ಕೂಡಿದೆ.

l ಶ್ರೀನಿವಾಸಪುರ ತಾಲ್ಲೂಕು, ಹಾಗಲಕಾಯಿ (Bitter gourd) ಗುಣಮಟ್ಟದಿಂದ ಕೂಡಿದೆ.

l ಮಾಲೂರು, ಬೀಟ್ರೂಟ್ ( Beetroot) ಗುಣಮಟ್ಟದಿಂದ ಕೂಡಿದೆ.

l ಎಚ್ ಕ್ರಾಸ್, ದುಂಡು ಬದನೆಕಾಯಿ (Round Brinjal) ಗುಣಮಟ್ಟದಿಂದ ಕೂಡಿದೆ.

ಪ್ರಯೋಗಾಲಯದಿಂದ ಬಂದಿರುವ ಅಧಿಕೃತ ವಿಶ್ಲೇಷಣಾ ವರದಿಯ ಪ್ರಕಾರ ಜಿಲ್ಲೆಯ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದ್ದ ಎಲ್ಲಾ 6 ತರಕಾರಿ ಮಾದರಿಗಳು ಸಂಪೂರ್ಣವಾಗಿ ಉತ್ತಮ ಗುಣಮಟ್ಟದಿಂದ ಕೂಡಿವೆ ಎಂದು ದೃಢಪಟ್ಟಿದೆ. ಹೀಗಾಗಿ, ಸಾರ್ವಜನಿಕರು ಹಾಗೂ ಗ್ರಾಹಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಗಳ ಬಳಕೆಯ ಬಗ್ಗೆ ಯಾವುದೇ ರೀತಿಯ ಆತಂಕ, ಭಯ ಅಥವಾ ಸಂಶಯ ಪಡಬೇಕಾದ ಅಗತ್ಯವಿಲ್ಲ ಎಂದು ಇಲಾಖೆಯ ಅಧಿಕಾರಿಗಳುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-18-1874029252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.