ವೇಮಗಲ್: ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ಚೊಚ್ಚಲ ಬಜೆಟ್ ಅನ್ನು ಮಂಗಳವಾರ ಮಂಡಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಡಿ.ಅನುಷಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಮತ್ತು ಸಾರ್ವಜನಿಕ ಸೌಕರ್ಯಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಟ್ಟು ₹76.10 ಕೋಟಿ ಅಂದಾಜು ಆದಾಯ ಹಾಗೂ ₹35.27 ಲಕ್ಷ ಉಳಿತಾಯದ ಆಯವ್ಯಯಕ್ಕೆ ಸರ್ವಾನುಮತದ ಅಂಗೀಕಾರ ನೀಡಲಾಯಿತು.

ಈ ವೇಳೆ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಈ ಬಾರಿಯ ಬಜೆಟ್ನಲ್ಲಿ ಪಟ್ಟಣದ ಮೂಲಸೌಕರ್ಯ ಹಾಗೂ ಸ್ವಚ್ಛತೆಗೆ ಸಿಂಹಪಾಲು ನೀಡಲಾಗಿದೆ. ನೂತನ ಪಟ್ಟಣ ಪಂಚಾಯಿತಿ ಕಚೇರಿ ಸಂಕೀರ್ಣದ ನಿರ್ಮಾಣ, ನೂತನ ಬಸ್ ನಿಲ್ದಾಣ ಸ್ಥಾಪನೆ, ರಾಮಶೆಟ್ಟಿ ಬಯಲು ರಂಗಮಂದಿರವನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಘೋಷಿಸಲಾಗಿದೆ. ಬಸ್ ನಿಲ್ದಾಣದಲ್ಲಿ ನೂತನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಅಮೃತ್ 2.0 ಯೋಜನೆ ಮೂಲಕ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

‘ಸ್ವಚ್ಛ ವೇಮಗಲ್’ ನಿರ್ಮಾಣಕ್ಕಾಗಿ ಎರಡು ಹೊಸ ಕಸ ಸಂಗ್ರಹಣಾ ವಾಹನ ಹಾಗೂ ಚರಂಡಿ ಸ್ವಚ್ಛತೆ ಮತ್ತು ತುರ್ತು ಕಾಮಗಾರಿಗಳಿಗಾಗಿ ಮಿನಿ ಬೃಹತ್ ನಿರ್ಮಾಣ ಯಂತ್ರ ಖರೀದಿಗೆ ಬಜೆಟ್ನಲ್ಲಿ ಹಣ ಮೀಸಲಿಡಲಾಗಿದೆ ಎಂದರು.

ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಮುಖ್ಯಾಧಿಕಾರಿ ಎಸ್.ಎಂ.ವೆಂಕಟೇಶ್, ಪಂಚಾಯಿತಿ ಸದಸ್ಯರಾದ ಅಂಜಲಿ ಪ್ರಕಾಶ್, ಜೆಸಿಬಿ ರಾಮು, ರವಿಚಂದ್ರ, ಲೋಕೇಶ್ ಮರಿಯಪ್ಪ, ಮಂಜುಳಾ, ಸುಬ್ರಮಣ್ಯಂ, ರಮೇಶ್, ತೌಸಫ್ ಖಾನ್, ಗಂಗಪ್ಪ, ಮುನಿರಾಜ್, ಶಿಲ್ಪ, ನಾಗೇಶ್, ದೀಪ, ಸುಜಾತಮ್ಮ, ಶಶಿಕಲಾ, ತಿರುಮಳಪ್ಪ, ನಟರಾಜ್, ಸನಾವುಲ್ಲಾ ಖಾನ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-18-1155867013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.