ವೇಮಗಲ್: ಬೇಸಿಗೆ ಎದುರಿಸಲು ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯು ಸಕಲ ಸಿದ್ಧತೆ ಮಾಡಿಕೊಂಡಿದ್ದು, ನೀರಿನ ಅದಾಲತ್ ಆಂದೋಲನವು ತೀವ್ರಗತಿಯಲ್ಲಿ ಸಾಗುತ್ತಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಟ್ಟು 17 ವಾರ್ಡ್ಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡವು ಮನೆ ಮನೆಗೆ ಭೇಟಿ ನೀಡಿ, ನೀರಿನ ಅಭಾವದ ಕುರಿತು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.

ನಲ್ಲಿಗಳಲ್ಲಿ ನೀರು ಪೋಲಾಗುವುದು, ಶುದ್ಧೀಕರಿಸಿದ ಕುಡಿಯುವ ನೀರನ್ನು ವಾಹನ ತೊಳೆಯಲು ಅಥವಾ ಗಿಡಗಳಿಗೆ ಬಳಸುವುದನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುತ್ತಿದೆ.

17 ವಾರ್ಡ್ಗಳಲ್ಲಿ 72 ಕೊಳವೆಬಾವಿಗಳಿದ್ದು, ಇವುಗಳ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗಿದೆ. ಪಟ್ಟಣದಾದ್ಯಂತ ಇರುವ 19 ಓವರ್ ಹೆಡ್ ಟ್ಯಾಂಕ್ಗಳನ್ನು ರಾಸಾಯನಿಕ ಮುಕ್ತವಾಗಿ ಸ್ವಚ್ಛಗೊಳಿಸಿ, ನೀರಿನ ಶೇಖರಣೆಗೆ ಸನ್ನದ್ಧಗೊಳಿಸಲಾಗಿದೆ. ಸಾರ್ವಜನಿಕರಿಗೆ ಆರೋಗ್ಯಕರ ಮತ್ತು ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ.

ಪೈಪ್ಲೈನ್ ಜಾಲದಲ್ಲಿ ಕಂಡುಬರುವ ಸಣ್ಣಪುಟ್ಟ ಸೋರಿಕೆ ಪತ್ತೆಹಚ್ಚಲು ತುರ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ನೀರನ್ನು ಯಾವುದೇ ಅಡೆತಡೆ ಇಲ್ಲದೆ, ಎಲ್ಲೂ ನೀರು ಪೋಲಾಗದಂತೆ ವಿಶೇಷ ನಿಗಾ ವಹಿಸಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಮೋಟಾರ್ ಸುಟ್ಟು ಹೋಗುವುದು ಅಥವಾ ತಾಂತ್ರಿಕ ದೋಷದಿಂದ ನೀರು ನಿಲ್ಲುವ ಸಂಭವವಿರುತ್ತದೆ. ಇದನ್ನು ಅರಿತ ಪಂಚಾಯಿತಿ ಆಡಳಿತವು ಹೆಚ್ಚುವರಿ ಮೋಟಾರ್ ಮತ್ತು ಬಿಡಿಭಾಗಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಂಪ್ ಮತ್ತು ಮೋಟಾರ್ ಸರ್ವಿಸ್ ಮಾಡಿಸಲಾಗಿದೆ. ಯಾವುದೇ ಕೊಳವೆಬಾವಿ ಕೆಟ್ಟು ನಿಂತರೂ ಕೇವಲ ಕೆಲವೇ ಗಂಟೆಗಳಲ್ಲಿ ಅದನ್ನು ಸರಿಪಡಿಸುವಂತಹ ತುರ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ.

ಸಾರ್ವಜನಿಕರ ದೂರುಗಳನ್ನು ಆಲಿಸಲು ಮತ್ತು ನೀರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಪಟ್ಟಣ ಪಂಚಾಯಿತಿಯು ನೂತನವಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಪಟ್ಟಣದ ನಿವಾಸಿಗಳು ನೀರಿನ ಕೊರತೆ, ಪೈಪ್ಲೈನ್ ಒಡೆದು ನೀರು ಪೋಲಾಗುತ್ತಿರುವುದು ಅಥವಾ ಇನ್ಯಾವುದೇ ನೀರಿನ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ಸಹಾಯವಾಣಿ 81522 00568 ಗೆ ಕರೆ ಮಾಡಿ ಮಾಹಿತಿ ನೀಡಿ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಧಾವಿಸಿ ಸಮಸ್ಯೆ ಬಗೆಹರಿಸಲಿದ್ದಾರೆ.

ಪಟ್ಟಣದಲ್ಲಿ ಮೇ.6 ರಿಂದ ನೀರಿನ ಅದಾಲತ್ ಸಭೆಗಳು ನಡೆಯುತ್ತಿವೆ.

ಒಟ್ಟಾರೆಯಾಗಿ ಈ ಬೇಸಿಗೆಯಲ್ಲಿ ಪಟ್ಟಣದ ನೀರಿನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯು ವ್ಯವಸ್ಥೆ ಮಾಡಿಕೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-18-54463177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.