ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಲ್ಲಿ ಹೆಚ್ಚಾಗಿ ಸುಸ್ತು, ಬಿಪಿ ಕಡಿಮೆಯಾಗುವುದು, ನಿರ್ಜಲೀಕರಣ, ಕಣ್ಣು ಉರಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ವೇಳೆ ಹೆಚ್ಚು ನೀರಿನ ಅಂಶವಿರುವ ತರಕಾರಿ ಸೇವಿಸಬೇಕು. ಜೊತೆಗೆ ನೀರನ್ನು ಹೆಚ್ಚು ಸೇವಿಸಬೇಕು. ಈ ಮೊದಲು ನಿರ್ಜಲೀಕರಣ, ಸುಸ್ತಿನಿಂದ 5 ರಿಂದ 10 ಮಂದಿ ಪ್ರತಿದಿನ ಆಸ್ಪತ್ರೆಗೆ ಬರುವವರು. ಬೇಸಿಗೆಯಲ್ಲಿ 20 ರಿಂದ 30 ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
-ರವಿ ಕಿರಣ್, ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ವೇಮಗಲ್