ವೇಮಗಲ್: ಪಟ್ಟಣ ಪಂಚಾಯಿತಿ 2 ಮತ್ತು 3ನೇ ವಾರ್ಡ್ ಕಲ್ವಮಂಜಲಿ ಹಾಗೂ ಚಿಕ್ಕವಲ್ಲಬ್ಬಿ ಗ್ರಾಮಸ್ಥರು ರಸ್ತೆ ನಿರ್ಮಾಣದ ನಿರ್ಲಕ್ಷ್ಯದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.

ಸುಮಾರು ಎರಡು ತಿಂಗಳ ಹಿಂದೆ 3 ಕಿ.ಮೀ ಮತ್ತು 5 ಕಿ.ಮೀ. ಉದ್ದದ ಎರಡು ಪ್ರಮುಖ ರಸ್ತೆಗಳನ್ನು ಅಗೆದಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರು ಸಂಪೂರ್ಣವಾಗಿ ದ್ವೀಪದಂತಾಗಿದ್ದಾರೆ. ವೃದ್ಧರು, ರೋಗಿಗಳು, ಮಕ್ಕಳು ಓಡಾಡಲು ತೀವ್ರ ತೊಂದರೆ ಉಂಟಾಗಿದೆ.

ಪರೀಕ್ಷಾ ಸಮಯವಾಗಿರುವುದರಿಂದ ವಿದ್ಯಾರ್ಥಿಗಳು ಅಗೆದ ರಸ್ತೆಯಲ್ಲೇ ನಡೆದುಕೊಂಡು ಪಟ್ಟಣದ ಶಾಲೆಗಳಿಗೆ ತಲುಪಬೇಕಾಗಿದೆ. ಗ್ರಾಮಕ್ಕೆ ಓಡುತ್ತಿದ್ದ ಏಕಮಾತ್ರ ಬಸ್ ಸೇವೆ ನಿಲ್ಲಿಸಿದೆ. ಇತ್ತೀಚೆಗೆ ವೃದ್ಧರೊಬ್ಬರು ಬಿದ್ದು ಗಾಯಗೊಂಡಿದ್ದಾರೆ.

ಇದರ ಜೊತೆಗೆ, ಐತಿಹಾಸಿಕ ಕರಗ ಮಹೋತ್ಸವ ಸಮೀಪಿಸುತ್ತಿದ್ದು, ಸಾವಿರಾರು ಭಕ್ತರು ಬರಿಗಾಲಿನಲ್ಲಿ ಈ ಹಾಳಾದ ರಸ್ತೆಯಲ್ಲಿ ನಡೆಯಬೇಕಾಗಿರುವ ಆತಂಕವೂ ಇದೆ.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಎಇಇ ಗೋವಿಂದಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ಮತ್ತು ಗುತ್ತಿಗೆದಾರರ ಪರವಾಗಿ ಅಂಬರೀಶ್ ಅವರು ತ್ವರಿತವಾಗಿ ಗುಣಮಟ್ಟದ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಕೆಲಸ ಚುರುಕುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಯನ್ನು ಗ್ರಾಮಸ್ಥರು ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಕೆ.ಎನ್. ಚಂದ್ರೇಗೌಡ, ಕಲ್ವಮಂಜಲಿ ಸಿ.ಶಿವಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-18-479983265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.