ವೇಮಗಲ್: ವೇಮಗಲ್ ಮತ್ತು ಕೋಲಾರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ 96ರ ತಲಗುಂದ ಗ್ರಾಮದ ಬಳಿ ರಸ್ತೆ ಇಕ್ಕೆಲಗಳಲ್ಲಿ ಸಾಲಾಗಿ ಬೆಳೆದಿರುವ ಗುಲ್ ಮೊಹರ್ ಮರಗಳು ಸುಡು ಬಿಸಿಲಿನಲ್ಲೂ ಕೆಂಪು ರಂಗು ಚೆಲ್ಲುತ್ತಿದ್ದು, ದಾರಿಹೋಕರ ಕಣ್ಮನ ಸೆಳೆಯುತ್ತಿವೆ.

ತಲಗುಂದ ಗೇಟ್ನಿಂದ ಚೊಕ್ಕಹಳ್ಳಿ ಗೇಟ್ವರೆಗೆ ಒಂದು ಕಿ.ಮೀ. ಬೃಹತ್ ಮರಗಳು ಬೆಳೆದಿದ್ದು, ಮರದ ತುಂಬಾ ಅರಳಿರುವ ಕೆಂಪು ಹೂಗಳು ಆಕರ್ಷಿಸುತ್ತಿವೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಸಾರ್ವಜನಿಕರು ಈ ನಿಸರ್ಗದ ಸುಂದರ ದೃಶ್ಯಗಳು ಮೈಮರೆಸುವಂತಿವೆ.

ಸಸ್ಯಶಾಸ್ತ್ರೀಯವಾಗಿ ಡೆಲೋನಿಕ್ಸ್ ರೆಜಿಯಾ ಎಂದು ಕರೆಯಲ್ಪಡುವ ಗುಲ್ ಮೊಹರ್ ಮರಗಳಿಗೆ ದೀರ್ಘ ಇತಿಹಾಸವಿದೆ. ಮೂಲತಃ ಆಫ್ರಿಕಾ ಖಂಡದ ಮಡಗಾಸ್ಕರ್ ದ್ವೀಪಕ್ಕೆ ಸೇರಿದ ಈ ಮರಗಳು ಕಾಲಕ್ರಮೇಣ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದವು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಮರವು ಭಾರತಕ್ಕೆ ಕಾಲಿಟ್ಟಿತ್ತು. ಅತೀವ ಸೌಂದರ್ಯ ಮತ್ತು ದಟ್ಟ ನೆರಳು ನೀಡುವ ಗುಣದಿಂದಾಗಿ ಬ್ರಿಟಿಷರು ಇದನ್ನು ತಮ್ಮ ಬಂಗಲೆಗಳ ಮುಂದೆ, ರಸ್ತೆ ಬದಿಯಲ್ಲಿ ಮತ್ತು ಸಾರ್ವಜನಿಕ ಉದ್ಯಾನವನಗಳಲ್ಲಿ ನೆಡಲು ಪ್ರಾರಂಭಿಸಿದರು. ಅಂದಿನಿಂದ ಇದು ಭಾರತದ ಹವಾಮಾನಕ್ಕೆ ಹೊಂದಿಕೊಂಡು ದೇಶದಾದ್ಯಂತ ಹರಡಿತು. ಇಂದು ಬೇಸಿಗೆಗೆ ನೆರಳು ನೀಡುವ ಮರಗಳಾಗಿ ಮಾರ್ಪಟ್ಟಿವೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ನಿಂದ ಜೂನ್ವರೆಗೆ ಈ ಮರವು ಸಂಪೂರ್ಣ ಹೂವುಗಳಿಂದ ತುಂಬಿರುತ್ತದೆ. ಇದರ ಎಲೆಗಳು ಫೆರ್ನ್ ಗಿಡದ ಎಲೆಗಳಂತೆ ಸಣ್ಣದಾಗಿ ಮತ್ತು ಸುಂದರವಾಗಿರುತ್ತವೆ. ಅಲಂಕಾರಿಕ ಮರವಾಗಿ ಇದು ಉದ್ಯಾನವನ ಹಾಗೂ ರಸ್ತೆ ಬದಿಯ ಅಂದವನ್ನು ಹೆಚ್ಚಿಸುತ್ತದೆ. ಇದರ ಹೂವುಗಳು ನೋಡುಗರಿಗೆ ಸುಂದರ ಅನುಭವ ನೀಡುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-18-1818134966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.