ಕೋಲಾರ: ನಗರ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿ (ಹಾರೋಹಳ್ಳಿ ಗಾರ್ಡನ್) ಕೊಳಚೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಚರಂಡಿ ಕಟ್ಟಿಕೊಂಡಿದ್ದು, ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೊಸದಾಗಿ ಸಿ.ಸಿ.ರಸ್ತೆ ನಿರ್ಮಾಣ ಮಾಡುತ್ತಿದ್ದು, ಪಕ್ಕದಲ್ಲಿರುವ ಚರಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ಚರಂಡಿಯು ಅಲ್ಲಲ್ಲಿ ಉಬ್ಬುತಗ್ಗು ಇರುವ ಕಾರಣ ನೀರು ಮುಂದೆ ಹರಿದು ಹೋಗುತ್ತಿಲ್ಲ. ಕೊಳಚೆ ನೀರಿನ ಜೊತೆ ಅಲ್ಲಲ್ಲಿ ತ್ಯಾಜ್ಯವೂ ತುಂಬಿಕೊಂಡಿದೆ. ಚರಂಡಿಯನ್ನು ಎತ್ತರಿಸಿ ಕೊಳಚೆ ನೀರು ಹರಿಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹಲವಾರು ತಿಂಗಳಿಂದ ನರಕಯಾತನೆ ಅನುಭವಿಸುತ್ತಿದ್ದು, ಈವರೆಗೆ ಸಮಸ್ಯೆಗೆ ಸ್ಪಂದಿಸಿಲ್ಲ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅವೈಜ್ಞಾನಿಕವಾಗಿ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕೊಳಚೆ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡದಿದ್ದರೆ ಸಿ.ಸಿ ರಸ್ತೆ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ. ನಾವು ರಸ್ತೆ ಅಭಿವೃದ್ಧಿ ವಿರೋಧಿಸುತ್ತಿಲ್ಲ. ಆದರೆ, ಚರಂಡಿ ಸಮಸ್ಯೆ ಮೊದಲು ಸರಿ ಹೋಗಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ಬಾಬು ಮಾತನಾಡಿ, ‘ಶಾಸಕರು ಬಂದು ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಹೋಗಿದ್ದರು. ನಮ್ಮ ಬಡಾವಣೆಯ ಚರಂಡಿ ವ್ಯವಸ್ಥೆ ಸರಿಹೋಗುತ್ತದೆ ಎಂದು ಖುಷಿಯಾಗಿತ್ತು. ಆದರೆ, ಕೆಲಸ ಸರಿಯಾಗಿ ನಡೆಯುತ್ತಿಲ್ಲ. ರಸ್ತೆ ಕಾಮಗಾರಿ ಆರಂಭವಾಗಿ ವರ್ಷವೇ ಕಳೆದಿದೆ. ಈವರಗೆ ಕಾಮಗಾರಿ ಮುಗಿದಿಲ್ಲ. ಮುಖ್ಯಮಂತ್ರಿ ಕಚೇರಿಗೂ ಈ ವಿಚಾರ ತಲುಪಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದರು. ಚರಂಡಿಗೆ ಮಣ್ಣು ತುಂಬಿ ಎತ್ತರಿಸುತ್ತಿದ್ದಾರೆ. ಹೀಗಾಗಿ, ಸುಮಾರು 80 ಮನೆಗಳ ತ್ಯಾಜ್ಯ ನೀರು ಹರಿಯಲು ಜಾಗವಿಲ್ಲದಂತಾಗಿದೆ. ಎಲ್ಲಾ ಮನೆಯವರಿಗೆ ಸಮಸ್ಯೆ ಉಂಟಾಗಿದೆ’ ಎಂದು ತಿಳಿಸಿದರು.

ಚರಂಡಿ ಎತ್ತರ ತಗ್ಗಿಸಿ ನೀರು ಹೋಗಲು ಅವಕಾಶ ಮಾಡಿಕೊಡಬೇಕು. ನಮಗೆ ರಸ್ತೆಗಿಂತ ಚರಂಡಿಯೇ ಮುಖ್ಯ. ಆ ಬಳಿಕ ರಸ್ತೆ ನಿರ್ಮಿಸಿಕೊಳ್ಳಲಿ ಎಂದರು.

ಬಡಾವಣೆಯ ಲಕ್ಷ್ಮಮ್ಮ ಸೇರಿದಂತೆ ಹಲವು ಮಹಿಳೆಯರು ಸ್ಥಳದಲ್ಲಿದ್ದು, ಚರಂಡಿ ವ್ಯವಸ್ಥೆ ಸರಿ ಮಾಡಿ ಎಂದು ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-18-381260797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.