ಒಂದು ಕೆರೆ ಅದೆಷ್ಟೋ ರೈತರ ಬದುಕನ್ನು ಮುನ್ನಡೆಸುತ್ತದೆ. ಅದೆಷ್ಟೋ ಜೀವರಾಶಿಗಳ ಹೊಟ್ಟೆ ತುಂಬಿಸುತ್ತದೆ. ಎಷ್ಟೋ ಮರಗಿಡಗಳಿಗೆ ಉಸಿರು ತುಂಬುತ್ತದೆ. ಕೆರೆಯೊಂದು ಅಭಿವೃದ್ಧಿಯಾದರೆ ಇಡೀ ಹಳ್ಳಿಯೇ ಅಭಿವೃದ್ಧಿಯಾದಂತೆ. ಅದರಲ್ಲೂ ಕೋಲಾರ ಜಿಲ್ಲೆಯ ಜನರಿಗೆ ಕೆರೆಗಳು ಜೀವನಾಡಿ. ಕೆರೆಗಳೇ ದೇವರು, ಕೆರೆಗಳೇ ಅನ್ನದಾತ. ಇಂಥ ಜಿಲ್ಲೆಯ ಪುಟ್ಟ ಹಳ್ಳಿಗಳಲ್ಲಿ ಕೆರೆಗಳಿಗೆ ಜೀವಕಳೆ ತುಂಬುವ ಕೆಲಸ ಸದ್ದಿಲ್ಲದೆ ನಡೆದಿದೆ. ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್.ಆಶಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜಲಕ್ರಾಂತಿಯ ಚಿತ್ರಣ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.