ಕೋಲಾರ: ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಶನಿವಾರ ಕನ್ನಡದ್ದೇ ಮಾತು. ಬೀದಿಬೀದಿಗಳಲ್ಲಿ ಕನ್ನಡದ ಬಾವುಟ, ಕನ್ನಡದ ಕಂಪು. 70ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಕನ್ನಡ ಸಂಘಟನೆಗಳಿಂದ ವಿವಿಧ ಕಾರ್ಯಕ್ರಮ ಆಯೋಜನೆ ಮೂಲಕ ಕನ್ನಡ ಕಹಳೆ ಮೊಳಗಿಸಲಾಯಿತು.

ಆನೆ ಮೇಲೆ ಅಂಬಾರಿಯಲ್ಲಿ ನಗರದೇವತೆ ಕೋಲಾರಮ್ಮ ತಾಯಿಯ ಉತ್ಸವ ಮೂರ್ತಿ ಇರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ 35 ವರ್ಷದ ‘ಲಕ್ಷ್ಮಿ’ ಆನೆಯು ನೋಡುಗರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಸ್ತಬ್ಧಚಿತ್ರ, ಪಲ್ಲಕ್ಕಿಗಳು ಸಾಗಿದವು. ಕಲಾವಿದರು ಮೆರುಗು ತುಂಬಿದರು.

ಶ್ರೀಭುವನೇಶ್ವರಿ ಕನ್ನಡ ಸಂಘದಿಂದ ಗಾಂಧಿವನದ ಬಳಿ ಮೆರವಣಿಗೆ ಆರಂಭಿಸಲಾಯಿತು. ಎಂ.ಜಿ.ರಸ್ತೆ, ಅಮ್ಮವಾರಿಪೇಟೆ ವೃತ್ತ, ಮೆಕ್ಕೆ ವೃತ್ತದ ಮೂಲಕ ಸಾಗಿ, ಬಂಗಾರಪೇಟೆ ರಸ್ತೆಯ ಕಾಲೇಜು ವೃತ್ತ, ಅಂಬೇಡ್ಕರ್ ವೃತ್ತದಿಂದ ಕೆಇಬಿ ಕಲ್ಯಾಣ ಮಂಟಪದ ಬಳಿ ಮುಕ್ತಾಯಗೊಂಡಿತು. ಅಪಾರ ಜನಸಮೂಹದ ನಡುವೆ ಗಜರಾಣಿ ‘ಲಕ್ಷ್ಮಿ’ ಗಾಂಭೀರ್ಯದಿಂದ ಹೆಜ್ಜೆ ಇಟ್ಟು ನಡೆದಳು.

ಕನ್ನಡಕ್ಕಾಗಿ ದುಡಿದವರ ಭಾವಚಿತ್ರಗಳು ಹೊಂದಿರುವ ಐವತ್ತಕ್ಕೂ ಹೆಚ್ಚು ಆಟೊಗಳು, ನೂರಕ್ಕೂ ಹೆಚ್ಚು ಮಹಿಳೆಯರು ಕಳಶ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಗರದಲ್ಲಿ ಅಕ್ಷರಶಃ ನಾಡಹಬ್ಬ ದಸರೆಯ ವಾತಾವರಣ ನಿರ್ಮಾಣಗೊಂಡಿತ್ತು.

ನಗರದ ಮಹಿಳಾ ಸಮಾಜ ರಚಿಸಿದ್ದ ಚಿತ್ರದುರ್ಗದ ಕಲ್ಲಿನಕೋಟೆಯ ವೀರವನಿತೆ ಒನಕೆ ಓಬವ್ವರ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಸಿದ್ಧಪಡಿಸಿದ್ದ ಸ್ತಬ್ಧಚಿತ್ರ, ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸುವ ಸ್ತಬ್ಧಚಿತ್ರ ಮನಸೊರೆಗೊಂಡವು. ಅದೇ ರೀತಿ ನಗರದ ಬ್ರಹ್ಮಕುಮಾರಿ ಈಶ್ವರಿ ವಿವಿಯಿಂದ ವಿಶಿಷ್ಟ ರೀತಿಯ ಸ್ವರ್ಣಯುಗದ ಸ್ತಬ್ದಚಿತ್ರವೂ ಸಾಗಿ ಬಂತು. ಡೊಳ್ಳು ಕುಣಿತ, ತಮಟೆ, ಗಾರಡಿ ಬೊಂಬೆಗಳು, ಚಂಬೆ, ಕೀಲು ಕುದುರೆ, ವೀರಗಾಸೆ ಮತ್ತಿತರ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

ಮೆರವಣಿಗೆಯಲ್ಲಿ ಜನಸಾಗರ

ಕೋಲಾರ ನಗರದ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಮೆರವಣಿಗೆ ಕಣ್ತುಂಬಿಕೊಂಡರು. ಕೋಲಾರಮ್ಮ ತಾಯಿಗೆ ನಮಿಸಿದರು. ಅಂಗಡಿ ಮಳಿಗೆ ಮಹಡಿ ಬಾಲ್ಕನಿಗಳಲ್ಲಿ ನಿಂತು ಫೋಟೊ ಕ್ಲಿಕ್ಕಿಸಿದರು. ಹಲವರು ಆನೆ ಬಳಿ ನಿಂತು ಸೆಲ್ಫಿ ತೆಗೆದುಕೊಂಡರು. ಮೆರವಣಿಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದ್ದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆಯಲ್ಲಿ ‘ಲಕ್ಷ್ಮಿ’ ಆನೆ ಯಾವುದೇ ತೊಂದರೆ ನೀಡದೆ ಸೊಂಡಿಲು ಅಲುಗಾಡಿಸುತ್ತಾ ಪ್ರೀತಿ ತೋರುತ್ತಾ ಶಾಂತಿಚಿತ್ತದಿಂದ ಹೆಜ್ಜೆ ಇಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.