ಮುಳಬಾಗಿಲು: ತಾಲ್ಲೂಕಿನ ಕುರುಡುಮಲೆಯ ಶ್ರೀ ಲಕ್ಷ್ಮಿ ಗಣಪತಿ ದೇವಾಲಯದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಸುಮಾರು ಒಂದು ವರ್ಷದ ಅವಧಿಯಿಂದ ಹುಂಡಿಯಲ್ಲಿದ್ದ ಸಂಗ್ರಹವಾಗಿದ್ದ ಹಣವನ್ನು ಎಣಿಕೆ ಮಾಡಿದಾಗ ಒಟ್ಟು ₹ 18.22 ಲಕ್ಷ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಣಿಕೆ ವೇಳೆ ಮುಜರಾಯಿ ತಹಶೀಲ್ದಾರ್ ಶ್ರೀನಿವಾಸ ಗೌಡ ಹಾಗೂ ಮುಜರಾಯಿ ಉಪ ತಹಶೀಲ್ದಾರ್ ಸುಬ್ರಮಣ್ಯ, ಅಧಿಕಾರಿಗಳು ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯವರು ಹಾಜರಿದ್ದರು.

ಇಷ್ಟಾರ್ಥ ಸಿದ್ಧಿ ಹಾಗೂ ತಾಲ್ಲೂಕಿನ ಮುಖ್ಯ ಪ್ರವಾಸಿ ತಾಣವಾದ ಲಕ್ಷ್ಮಿ ಗಣಪತಿ ದೇವಾಲಯಕ್ಕೆ ನಿತ್ಯ ನೂರಾರು ಮಂದಿ ಭೇಟಿ ನೀಡುವುದಲ್ಲದೆ ವಿಶೇಷ ದಿನಗಳಲ್ಲಿ ಸಾವಿರಾರು ಮಂದಿ ಬರುತ್ತಾರೆ. ಸಿಸಿ ಕ್ಯಾಮರಾಗಳು ಹಾಗೂ ವಿಡಿಯೋ ಕವರೇಜ್ ಮಾಡುವ ಮೂಲಕ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದ್ದು, ಹುಂಡಿಯಲ್ಲಿ ನಗದು ಬಿಟ್ಟರೆ ಬಂಗಾರ, ಬೆಳ್ಳಿ ಅಥವಾ ಇನ್ನಿತರೆ ಬೆಲೆ ಬಾಳುವ ವಸ್ತುಗಳು ಇರಲಿಲ್ಲ ಎಂದು ಮುಜರಾಯಿ ಉಪ ತಹಶೀಲ್ದಾರ್ ಸುಬ್ರಮಣಿ ಹೇಳಿದರು.

ದುಗ್ಗಸಂದ್ರ ಹೋಬಳಿ ಉಪ ತಹಶೀಲ್ದಾರ್ ನಾರಾಯಣಪ್ಪ, ಶ್ರೀನಿವಾಸ್, ದೇವಾಲಯದ ವ್ಯವಸ್ಥಾಪಕ ಸಮಿತಿಯ ಮಂಜುನಾಥ್, ವಿನಾಯಕ, ಶಿವಣ್ಣ, ವಿಜಯ್ ಕುಮಾರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.