ಜಮೀನು ವಿವಾದ: ಎಎಸ್‌ಐ ಆತ್ಮಹತ್ಯೆ ಬೆದರಿಕೆ

7

ಜಮೀನು ವಿವಾದ: ಎಎಸ್‌ಐ ಆತ್ಮಹತ್ಯೆ ಬೆದರಿಕೆ

Published:
Updated:
Deccan Herald

ಕೋಲಾರ: ಜಮೀನು ಬಿಡಿಸಿಕೊಡುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಡಿಎಆರ್‌) ಸಹಾಯಕ ಸಬ್‌ಇನ್‌ಸ್ಪೆಕ್ಟರ್ ವೆಂಕಟರೆಡ್ಡಿ ಎಂಬುವರು ಇಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು.

‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಆರಿಕುಂಟೆ ಗ್ರಾಮದಲ್ಲಿನ ಸರ್ಕಾರಿ ಗೋಮಾಳದ 38 ಗುಂಟೆ ಜಮೀನನ್ನು ಪೂರ್ವಜರ ಕಾಲದಿಂದಲೂ ಉಳುಮೆ ಮಾಡುತ್ತಿದ್ದೇವೆ. ಗ್ರಾಮದ ರಂಗನಾಥರೆಡ್ಡಿ ಎಂಬುವರು ನಕಲಿ ದಾಖಲೆಪತ್ರ ಸೃಷ್ಟಿಸಿ ನಮ್ಮ ಜಮೀನು ಕಬಳಿಸಿದ್ದಾರೆ’ ಎಂದು ವೆಂಕಟರೆಡ್ಡಿ ಆರೋಪಿಸಿದರು.

‘ಜಮೀನು ವಿವಾದ ಸಂಬಂಧ ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷವಾಗಿದೆ. ಆದರೆ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್‌ ಪ್ರಕರಣದ ವಿಚಾರಣೆ ನಡೆಸುತ್ತಿಲ್ಲ. ರಂಗನಾಥರೆಡ್ಡಿ ಜಮೀನಿನ ವಿಚಾರವಾಗಿ ನನ್ನ ವಿರುದ್ಧ ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.

ಪೆಟ್ರೋಲ್‌ ತುಂಬಿದ್ದ ಬಾಟಲಿಯನ್ನು ಜತೆಯಲ್ಲೇ ತೆಗೆದುಕೊಂಡು ಬಂದಿದ್ದ ವೆಂಕಟರೆಡ್ಡಿ, ‘ಜಮೀನಿನ ಸರ್ವೆ ಮಾಡಿಸಿ ಜಮೀನು ಬಿಡಿಸಿಕೊಡಬೇಕು. ಇಲ್ಲದಿದ್ದರೆ ಉಪ ವಿಭಾಗಾಧಿಕಾರಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಳ್ಳುತ್ತೇನೆ’ ಎಂದು ಬೆದರಿಸಿದರು. ಬಳಿಕ ಅವರನ್ನು ಭೇಟಿಯಾದ ಉಪ ವಿಭಾಗಾಧಿಕಾರಿ, ‘ಅ.4ರಂದು ನಾನೇ ಗ್ರಾಮಕ್ಕೆ ಬಂದು ಜಮೀನಿನ ಸರ್ವೆ ಮಾಡಿಸುತ್ತೇನೆ ಮತ್ತು ದಾಖಲೆಪತ್ರ ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !