28ಕ್ಕೆ ಕಾನೂನು ಶಿಬಿರ

7

28ಕ್ಕೆ ಕಾನೂನು ಶಿಬಿರ

Published:
Updated:

ಕೋಲಾರ: ‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಜುಲೈ 28ರಂದು ಕಾನೂನು ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಎಸ್.ಮಮದಾಪುರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಮಾಹಿತಿ ಇಲ್ಲದೆ ಕಾರ್ಮಿಕರು ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಅಂಘಟಿತ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟ ಸಂದರ್ಭದಲ್ಲಿ ₹ 10 ಲಕ್ಷ ಪರಿಹಾರ ನೀಡಬಹುದು. ಬ್ಯಾಂಕ್ ಖಾತೆ ಹೊಂದಿರುವ ಕಾರ್ಮಿಕರು ವರ್ಷಕ್ಕೆ ₹ 12 ವಿಮೆ ಮೊತ್ತ ಪಾವತಿಸಿದರೆ ಅಪಘಾತದ ಸಂದರ್ಭದಲ್ಲಿ ₹ 2 ಲಕ್ಷದವರೆಗೆ ಪರಿಹಾರ ಪಡೆಯಬಹುದು. ಹೀಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಯೋಜನೆಗಳ ಬಗ್ಗೆ ಶಿಬಿರದಲ್ಲಿ ಅರಿವು ಮೂಡಿಸಲಾಗುತ್ತದೆ’ ಎಂದು ವಿವರಿಸಿದರು.

‘ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡುತ್ತಾರೆ. ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಶಿಬಿರದ ಸ್ಥಳದಲ್ಲಿ ಮಾಹಿತಿ ಕೇಂದ್ರ ತೆರೆಯಲಾಗುವುದು. ಮಧ್ಯವರ್ತಿಗಳು ಸೌಕರ್ಯ ಕಲ್ಪಿಸುವುದಾಗಿ ನಂಬಿಸಿ ಫಲಾನುಭವಿಗಳನ್ನು ವಂಚಿಸುತ್ತಿರುವ ಬಗ್ಗೆ ದೂರು ಬಂದಿವೆ. ಇದಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

‘ಕಾರ್ಮಿಕ ಮಂಡಳಿಯಲ್ಲಿ ಕಾರ್ಮಿಕರ ಹೆಸರು ನೊಂದಣಿಗೆ ಅವಕಾಶ ನೀಡಲಾಗುವುದು. ಈ ಹಿಂದೆ ಶ್ರೀನಿವಾಸಪುರದಲ್ಲಿ ತರಬೇತಿ ಶಿಬಿರ ನಡೆಸಿದಾಗ 3,200 ಅರ್ಜಿ ಬಂದಿದ್ದವು. ಈ ಪೈಕಿ 2,358 ಅರ್ಜಿಗಳ ಫಲಾನುಭವಿಗಳಿಗೆ ಸೌಕರ್ಯ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್ ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !