ಶುಕ್ರವಾರ, ನವೆಂಬರ್ 15, 2019
21 °C
ಬಿಜೆಪಿ ವಿರುದ್ಧ ಸಚಿವ ಕೃಷ್ಣಬೈರೇಗೌಡ ಕಿಡಿ

ಸರ್ಕಾರ ಉರುಳಿಸಲು ವಾಮ ಮಾರ್ಗ: ಸಚಿವ ಕೃಷ್ಣಬೈರೇಗೌಡ

Published:
Updated:
Prajavani

ಕೋಲಾರ: ‘ಸರ್ಕಾರ ಉರುಳಿಸಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಮುಖಂಡರು ಇದೀಗ ವಾಮಮಾರ್ಗಕ್ಕೆ ಇಳಿದ್ದಾರೆ. ಹಣದ ಆಸೆ ತೋರಿಸಿ, ಶಾಸಕರನ್ನು ಖರೀದಿಸಲು ಮುಂದಾಗುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ರಚನೆ ಆದಾಗಿನಿಂದಲೂ ಅಧಿಕಾರಕ್ಕಾಗಿ ಬಿಜೆಪಿ ಮುಖಂಡರು ಇಲ್ಲದ ಕಸರತ್ತು ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದು, ಸರ್ಕಾರದ ಯೋಜನೆಗಳಿಗೂ ಅಡ್ಡಿಪಡಿಸುತ್ತಿದ್ದಾರೆ. ಬಿಜೆಪಿಯವರ ಕಿತಾಪತಿಯಿಂದಾಗಿ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು ಎಂದಿಗೂ ಬಿಜೆಪಿಯವರನ್ನು ಕ್ಷಮಿಸುವುದಿಲ್ಲ’ ಎಂದರು.

‘ಕಳೆದ ಒಂದು ವರ್ಷದಿಂದಲೂ ಆಪರೇಷನ್ ಕಮಲ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ನಮ್ಮ ಮೈತ್ರಿ ಸರ್ಕಾರ ಈ ಎಲ್ಲ ಅಡ್ಡಿಗಳನ್ನು ಎದುರಿಸಿ, ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವವನ್ನು ತುಳಿಯುವ ಕೆಲಸವಾಗಿದೆ. ಇನ್ನು ಮುಂದೆ ಕೂಡ ಸವಾಲುಗಳನ್ನು ಎದುರಿಸಿ, ಸರ್ಕಾರವನ್ನು ನಡೆಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಪ್ರತಿಕ್ರಿಯಿಸಿ (+)