ಬೇತಮಂಗಲ: ಸಮೀಪದ ಬಂಗಾರು ತಿರುಪತಿಯ ವೆಂಕಟರಮಣ ಸ್ವಾಮಿ ಹಾಗೂ ಅಲುವೇಲು ಮಂಗಮ್ಮ ದೇವಿ ಎರಡು ಬೆಟ್ಟಗಳಿಗೆ ಲಿಫ್ಟ್ ಅಳವಡಿಕೆ, ಸಿಸಿ ರಸ್ತೆ ಮತ್ತು ತಡೆಗೋಡೆ ನಿರ್ಮಾಣದ ಸ್ಥಳವನ್ನು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಎಇಇ ರಾಜಶೇಖರ್ ಹಾಗೂ ಗುತ್ತಿಗೆದಾರ ಚಂಗಾರೆಡ್ಡಿ ಪರಿಶೀಲನೆ ನಡೆಸಿದರು.

ಬೆಟ್ಟದ ಭೌಗೋಳಿಕ ಸ್ಥಿತಿ ಹಾಗೂ ಲಿಫ್ಟ್ ಅಳವಡಿಕೆಗೆ ಸೂಕ್ತ ತಾಂತ್ರಿಕ ಅಂಶಗಳ ಬಗ್ಗೆ ಈ ವೇಳೆ ಚರ್ಚಿಸಲಾಯಿತು. ಜೊತೆಗೆ ಸುಮಾರು ₹ 2 ಕೋಟಿ ವೆಚ್ಚದ ಈ ಕಾಮಗಾರಿಗೆ ಶಾಸಕಿ ರೂಪಕಲಾ ಶೀಘ್ರ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಭಕ್ತರ ಸುಗಮ ಸಂಚಾರಕ್ಕೆ ಸುಸಜ್ಜಿತ ಸಿಸಿ ರಸ್ತೆ ನಿರ್ಮಾಣ. ಮಳೆಗಾಲದಲ್ಲಿ ಮಣ್ಣು ಕುಸಿತ ತಡೆಯಲು ತಡೆಗೋಡೆ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ವಯೋವೃದ್ಧರು ಹಾಗೂ ದಿವ್ಯಾಂಗ ಭಕ್ತರಿಗೆ ಲಿಫ್ಟ್ ಸೌಲಭ್ಯ ವರದಾನವಾಗಲಿದೆ. ಗುಣಮಟ್ಟದ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಎಇಇ ರಾಜಶೇಖರ್ ಭರವಸೆ ನೀಡಿದರು.

ನವೀನ್ ರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಪೇಷ್ಕಾರ್ ಸುರೇಶ್ ಬಾಬು, ಸಿಬ್ಬಂದಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.