ಶುಕ್ರವಾರ, ಮಾರ್ಚ್ 31, 2023
32 °C

ಸಿಡಿಲು ಬಡಿದು ಹಸು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ಇಲ್ಲಿನ ಅಂಕತಟ್ಟಹಳ್ಳಿಯ ರೈತ ಮುನಿಯಪ್ಪ ಅವರಿಗೆ ಸೇರಿದ ಸುಮಾರು ₹ 60 ಸಾವಿರ ಬೆಲೆ ಬಾಳುವ ಸೀಮೆ ಹಸು ಸಿಡಿಲು ಬಡಿದು ಮೃತಪಟ್ಟಿದೆ.

ಮುನಿಯಪ್ಪ ತಮ್ಮ ಮನೆ ಬಳಿಯ ಮರದ ಕೆಳಗೆ ಹಸು ಕಟ್ಟಿದ್ದರು. ಬುಧವಾರ ಮಧ್ಯಾಹ್ನ ಏಕಾಏಕಿಯಾಗಿ ಮಳೆ ಬಂದಿದ್ದು, ಸಿಡಿಲು ಬಡಿದು ಹಸು ಮೃತ‍ಪಟ್ಟಿದೆ. 

ಪಶುವೈದ್ಯರಾದ ತ್ರಿಮೂರ್ತಿ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲಾಖೆಯಿಂದ ಬರುವಂತಹ ಪರಿಹಾರವನ್ನು ದೊರಕಿಸುವುದಾಗಿ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು