ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮತದಾನ ಸುಸೂತ್ರ, ಶೇ.77.15ರಷ್ಟು ಹಕ್ಕು ಚಲಾವಣೆ

Last Updated 3 ಮೇ 2019, 11:33 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ಮತದಾನ ನಡೆದಿದ್ದು, ಶೇ.77.15ರಷ್ಟು ಮತದಾನವಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಮಾಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಶೇ 83.84ರಷ್ಟು ಮತದಾನವಾಗಿದೆ. ಕೆಜಿಎಫ್ ಕ್ಷೇತ್ರದಲ್ಲಿ ತುಂಬಾ ಕಡಿಮೆ ಶೇ 69.99ರಷ್ಟು ಮತದಾನವಾಗಿದೆ’ ಎಂದರು.

‘ಉಳಿದಂತೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶೇ 78.42, ಚಿಂತಾಮಣಿ ಕ್ಷೇತ್ರದಲ್ಲಿ ಶೇ 77.52, ಶ್ರೀನಿವಾಸಪುರ ಕ್ಷೇತ್ರದಲ್ಲಿ ಶೇ 78.74, ಮುಳಬಾಗಿಲು ಶೇ 76.33, ಬಂಗಾರಪೇಟೆ ಶೇ 75.87 ಹಾಗೂ ಕೋಲಾರ ಕ್ಷೇತ್ರದಲ್ಲಿ ಶೇ 76.53ರಷ್ಟು ಮತದಾನವಾಗಿದೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಒಟ್ಟಾರೆ 16,28,782 ಮತದಾರರಿದ್ದು, ಈ ಪೈಕಿ 8,16,475 ಮಂದಿ ಪುರುಷ ಮತ್ತು 8,12,149 ಮಂದಿ ಮಹಿಳಾ ಮತದಾರರಾಗಿದ್ದಾರೆ. 158 ಮಂದಿ ಇತರ ಮತದಾರರಿದ್ದಾರೆ. ಕ್ಷೇತ್ರದ 2,100 ಮತಗಟ್ಟೆಗಳಲ್ಲಿ 12,55,976 ಮತದಾರರು ಮತ ಚಲಾಯಿಸಿದ್ದಾರೆ. 6,42,349 ಪುರುಷ ಮತ್ತು 6,13,607 ಮಹಿಳಾ, 20 ಮಂದಿ ಇತರ ಮತದಾರರು ಮತ ಹಾಕಿದ್ದಾರೆ’ ಎಂದು ವಿವರಿಸಿದರು.

‘ಶಿಡ್ಲಘಟ್ಟ ಕ್ಷೇತ್ರದ ವ್ಯಾಪ್ತಿಯಲ್ಲಿ 80,729 ಪುರುಷ, 75,500 ಮಹಿಳಾ ಹಾಗೂ ಇಬ್ಬರು ಮತದಾರರು ಸೇರಿದಂತೆ ಒಟ್ಟು 1,56,231 ಮಂದಿ ಮತ ಚಲಾಯಿಸಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ 85,507 ಪುರುಷ, 82,582 ಮಹಿಳಾ ಹಾಗೂ 8 ಮಂದಿ ಇತರ ಮತದಾರರು ಸೇರಿ 1,68,097 ಮಂದಿ ಮತ ಹಾಕಿದ್ದಾರೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ 83,388 ಪುರುಷ, 79,293 ಮಹಿಳಾ ಮತ್ತು ಇಬ್ಬರು ಇತರ ಮತದಾರರು ಸೇರಿ ಒಟ್ಟು 1,62,683 ಮಂದಿ ಮತದಾನ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮುಳಬಾಗಿಲು ಕ್ಷೇತ್ರದಲ್ಲಿ 80,751 ಪುರುಷ, 77,527 ಮಹಿಳಾ ಮತದಾರರು ಸೇರಿದಂತೆ 1,58,278 ಮಂದಿ ಮತ ಚಲಾಯಿಸಿದ್ದಾರೆ, ಕೆಜಿಎಫ್ ಕ್ಷೇತ್ರದಲ್ಲಿ 68,226 ಪುರುಷ, 67,257 ಮಹಿಳಾ ಹಾಗೂ 5 ಮಂದಿ ಇತರ ಮತದಾರರು ಸೇರಿದಂತೆ 1,35,488 ಮತದಾರರು ಮತ ಹಾಕಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ 76,339 ಪುರುಷ, 72,278 ಮಹಿಳೆಯರು ಸೇರಿದಂತೆ 1,48,617 ಮತದಾರರು ಮತ ಚಲಾಯಿಸಿದ್ದಾರೆ’ ಎಂದು ಹೇಳಿದರು.

‘ಕೋಲಾರ ಕ್ಷೇತ್ರದಲ್ಲಿ 88,748 ಪುರುಷ, 84,513 ಮಹಿಳಾ ಹಾಗೂ 3 ಮಂದಿ ಇತರ ಮತದಾರರು ಸೇರಿದಂತೆ 1,73,264 ಮಂದಿ ಮತ ಚಲಾಯಿಸಿದ್ದಾರೆ. ಮಾಲೂರು ಕ್ಷೇತ್ರದಲ್ಲಿ 78,661 ಪುರುಷ, 74,657 ಮಹಿಳಾ ಮತದಾರರು ಸೇರಿದಂತೆ 1,53,318 ಮಂದಿ ಮತ ಹಾಕಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT