ಕೋಲಾರ: ಮಧ್ಯ ಪ್ರಾಚ್ಯ ಯುದ್ಧದ ಕಾರಣ ಜಿಲ್ಲೆಯಲ್ಲಿ ಆಟೊಗಳಿಗೆ ಬಳಸುವ ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಮುಂದುವರಿದಿದ್ದು, ಆಟೊ ಚಾಲಕರು ಜೀವನ ಅಯೋಮಯವಾಗಿದೆ. ತಿಂಗಳಿನಿಂದ ಇದೇ ಪರಿಸ್ಥಿತಿ ನೆಲೆಸಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ದರವೂ ಏರಿಕೆ ಆಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ!

ಸರ್ಕಾರಿ ಸ್ವಾಮ್ಯದ ಬಂಕ್ಗಳಲ್ಲಿ 1 ಲೀಟರ್ ಎಲ್ಪಿಜಿಗೆ ₹ 60 ಇದ್ದದ್ದು ಈಗ ₹ 80 ಆಗಿದೆ. ಖಾಸಗಿ ಬಂಕ್ಗಳಲ್ಲಿ 1 ಲೀಟರ್ ಎಲ್ಪಿಜಿ ದರ ₹ 60 ಇದ್ದದ್ದು ಈಗ ₹ 98ಕ್ಕೇರಿದೆ.

ನಗರದಲ್ಲಿ ಸುಮಾರು ಎರಡೂವರೆ ಸಾವಿರ ಆಟೊಗಳಿದ್ದು, ಗ್ಯಾಸ್ ಫಿಲ್ಲಿಂಗ್ ಆಟೊಗಳ ಸಂಖ್ಯೆ ಹೆಚ್ಚಾಗಿದೆ. ಶೇ 60 ಎಲ್ಪಿಜಿ ಆಧಾರಿತ ಆಟೊ ಹಾಗೂ ಶೇ 40ರಷ್ಟು ಸಿಎನ್ಜಿ ಆಧಾರಿತ ಆಟೊಗಳಿವೆ. ಎಲ್ಪಿಜಿ ಲಭ್ಯತೆ ಇಲ್ಲದೆ ಚಾಲಕರ ಪರದಾಟ ಮುಂದುವರಿದಿದೆ.

ಕೋಲಾರ ನಗರದಲ್ಲಿ ಸರ್ಕಾರಿ ಸ್ವಾಮ್ಯದ ಏಕೈಕ ಆಟೊ ಎಲ್ಪಿಜಿ ಫಿಲ್ಲಿಂಗ್ ಕೇಂದ್ರ ಸದ್ಯ ಕಾರ್ಯಾಚರಣೆಯಲ್ಲಿ ತೊಡಗಿದೆ. ಅದಕ್ಕೆ ಆಟೊ ಚಾಲಕರು ಮುಗಿ ಬೀಳುತ್ತಿದ್ದಾರೆ. ಎಲ್ಪಿಜಿ ಕೊರತೆಯಿಂದ ಉಳಿದ ಕೇಂದ್ರಗಳಲ್ಲಿ ಈ ಸೌಲಭ್ಯ ಬಂದ್ ಆಗಿದೆ. ಖಾಸಗಿಯ ಎರಡು ಎಲ್ಪಿಜಿ ಫಿಲ್ಲಿಂಗ್ ಕೇಂದ್ರಗಳಿವೆ.

ಎಲ್ಪಿಜಿ ತುಂಬಿಸಿಕೊಳ್ಳಲು ಚಾಲಕರು ಊಟ, ತಿಂಡಿ, ನೀರು ಬಿಟ್ಟು ಬಿಸಿಲಿನಲ್ಲಿ ತಮ್ಮ ಆಟೊಗಳನ್ನು ಕಿಲೋ ಮೀಟರ್ ಗಟ್ಟಲೇ ದೂರದವರೆಗೆ ಸರತಿ ಸಾಲಿನಲ್ಲಿ ನಿಲ್ಲಿಸಿಕೊಂಡು ಕಾಯುತ್ತಿದ್ದಾರೆ. ಆರೇಳು ಗಂಟೆ ಕಾದರೂ ಕೆಲವರಿಗೆ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ, ಅವರ ಆದಾಯಕ್ಕೆ ಹೊಡೆತ ಬಿದ್ದಿದೆ.

ಕೆಲವರು ಚಿಂತಾಮಣಿಗೆ ಹೋಗಿ ಎಲ್ಪಿಜಿ ತುಂಬಿಸಿಕೊಂಡು ಬರುತ್ತಿದ್ದಾರೆ. ವೇಮಗಲ್ನಲ್ಲಿ ಮಾತ್ರ ಸಿಎನ್ಜಿ ಬಂಕ್ ಇದೆ. ಅದು ಬಿಟ್ಟರೆ ಮುಳಬಾಗಿಲು ರಸ್ತೆಯಲ್ಲಿ (ಕೋಲಾರ ನಗರದಿಂದ 12 ಕಿ.ಮೀ.) ಐಒಸಿ ಬಂಕ್ನಲ್ಲಿ ಸಿಎನ್ಜಿ ತುಂಬಿಸಿಕೊಳ್ಳಬೇಕಿದೆ. ದುಡಿಮೆಗಿಂತ ಖರ್ಚು ಹೆಚ್ಚಾಗಿದೆ. ಕೆಲವರು ಆಟೊ ಮನೆಯಲ್ಲೇ ನಿಲ್ಲಿಸಿ ಬೇರೆ ಕಡೆ ದುಡಿಮೆಯ ಮೂಲ ಕಂಡುಕೊಳ್ಳುತ್ತಿದ್ದಾರೆ.

‘ಆಟೊ ಚಾಲಕರು ಎಲ್ಪಿಜಿಗೆ ನಿತ್ಯ ₹ 200 ಖರ್ಚು ಮಾಡಿ ಕನಿಷ್ಠ ₹ 600 ವರೆಗೆ ದುಡಿಯುತ್ತಾರೆ. ಆದರೆ, ಈಗ ಎಲ್ಪಿಜಿ ಕೊರತೆಯಿಂದ ಆರೇಳು ಗಂಟೆ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಜೊತೆಗೆ ಎಲ್ಪಿಜಿ ದರವೂ ಬಹಳ ಏರಿಕೆ ಆಗಿದೆ. ಇದರಿಂದ ಆದಾಯಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ಕೆಲವರು ತಮ್ಮ ಆಟೊವನ್ನು ಮನೆಯಲ್ಲಿ ನಿಲ್ಲಿಸಿದ್ದಾರೆ. ಬಾಡಿಗೆ ಓಡಿಸುತ್ತಿದ್ದವರು ಬೇರೆ ಕೆಲಸ ನೋಡಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯ ಆಟೊ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ಯಾಸ್ ದರ ಏರಿದೆ ಬಾಡಿಗೆ ಹೆಚ್ಚು ಕೊಡಿ...

ಅಮೆರಿಕ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕರಿನೆರೆಳು ದೇಶದ ಕೆಲ ಜನರ ಬದುಕನ್ನು ಬುಡಮೇಲು ಮಾಡಿದ್ದು ಮಧ್ಯಮ ವರ್ಗದ ಜನರ ಪಾಡಂತೂ ಹೇಳತೀರದು. ‘ಗ್ಯಾಸ್ ದರ ಏರಿಕೆ ಆಗಿದೆ ಬಾಡಿಗೆ ಹೆಚ್ಚು ಕೊಡಿ. ಇಲ್ಲದಿದ್ದರೆ ನಾವು ಎಲ್ಲಿಗೂ ಬರಲ್ಲ’ ಎಂದು ಕೆಲ ಆಟೊ ಚಾಲಕರು ಗ್ರಾಹಕರಿಗೆ ಹೇಳುತ್ತಿದ್ದಾರೆ. ಇಲ್ಲಿ ಆಟೊದವರಿಗೂ ಕಷ್ಟ ಆಟೊ ಅವಲಂಬಿಸುವ ಜನಸಾಮಾನ್ಯರಿಗೂ ಕಷ್ಟ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಾದು ಆಟೊಗೆ ಎಲ್ಪಿಜಿ ತುಂಬಿಸಿಕೊಳ್ಳಬೇಕಾಯಿತು. ಇದರಿಂದ ದಿನದ ದುಡಿಮೆಗೆ ಹೊಡೆತ ಬಿದ್ದಿದೆ. ಹೀಗೆಯೇ ಮುಂದುವರಿದರೆ ಆಟೊ ಮನೆಯಲ್ಲಿ ನಿಲ್ಲಿಸಿ ಬೇರೆ ಕೆಲಸಕ್ಕೆ ಹೋಗುತ್ತೇವೆ ಎಂದು ಕುವೆಂಪುನಗರದ ಆಟೊ ಚಾಲಕ ರವೀಂದ್ರ ಬೇಸರದಿಂದ ನುಡಿದರು.

ಸಂಸದರು ಮಧ್ಯ ಪ್ರವೇಶಿಸಬೇಕು

ಎಲ್ಪಿಜಿ ಲಭ್ಯತೆ ಕೊರತೆಯಿಂದಾಗಿ ಕಾಳಸಂತೆಯಲ್ಲಿನ ಮಾರಾಟ ಬಂದ್ ಆಗಿದೆ. ಆದರೆ ಖಾಸಗಿ ಎಲ್ಪಿಜಿ ಫಿಲ್ಲಿಂಗ್ ಕೇಂದ್ರಗಳು ಯಾರ ನಿಯಂತ್ರಣದಲ್ಲೂ ಇಲ್ಲದಂತಾಗಿವೆ. ಲೋಕಸಭಾ ಸದಸ್ಯ ಎಂ.ಮಲ್ಲೇಶ್ ಬಾಬು ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಅವರು ಕೂಡ ಡೀಲರ್ ಆಗಿದ್ದು ಇತ್ತ ಗಮನ ಹರಿಸಬೇಕು. ಸರ್ಕಾರಿ ಸ್ವಾಮ್ಯದ ಹೆಚ್ಚಿನ ಬಂಕ್ಗಳಲ್ಲಿ ಎಲ್ಪಿಜಿ ಫಿಲ್ಲಿಂಗ್ಗೆ ಅವಕಾಶ ಮಾಡಿಕೊಡಬೇಕು. ಸಂಕಷ್ಟಕ್ಕೆ ಸಿಲುಕಿರುವ ಆಟೊ ಚಾಲಕರ ನೆರವಿಗೆ ಧಾವಿಸಬೇಕು ಎಂದು ರಾಜ್ಯ ಆಟೊ ಚಾಲಕರ ಕಲ್ಯಾಣ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.