ಮಾಲೂರು(ಕೋಲಾರ): ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿಯೊಬ್ಬರು ನಾಲ್ಕು ವರ್ಷದ ಹೆಣ್ಣು ಮಗುವಿನ ಮೈಕೈಗೆ ಸುಟ್ಟಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಗ್ರಾಮದ ಮುನಿರಾಜು ಮತ್ತು ಮುನಿಯಮ್ಮ ದಂಪತಿಯ ಮಗುವಿನ ಕೈ, ಕುತ್ತಿಗೆ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಬೊಬ್ಬೆಗಳು ಬಂದಿವೆ ಎಂದು ಪೋಷಕರು ದೂರಿದ್ದಾರೆ.

ಅಂಗನವಾಡಿ ಸಹಾಯಕಿ ಶ್ರೀದೇವಿ ಎಂಬುವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಬೈರಾರೆಡ್ಡಿ ಅವರಿಗೆ ಪೋಷಕರು ದೂರು ನೀಡಿದ್ದಾರೆ. ಅ.7ರಂದು ಈ ಘಟನೆ ನಡೆದಿದ್ದು, ಅಂಗನವಾಡಿ ಕೇಂದ್ರದಲ್ಲಿ 14 ಮಕ್ಕಳಿದ್ದಾರೆ.

‘ಈ ಹಿಂದೆಯೂ ಇದೇ ಮಗುವಿನ ಕಾಲನ್ನು ಅಂಗನವಾಡಿ ಸಹಾಯಕಿ ಸುಟ್ಟಿದ್ದರು. ಆಗ ಗ್ರಾಮಸ್ಥರು ಬುದ್ಧಿ ಹೇಳಿದ್ದರು. ನಮ್ಮ ಮಗುವನ್ನೇ ಗುರಿಯಾಗಿಟ್ಟುಕೊಂಡು ಎರಡನೇ ಬಾರಿ ಈ ಕೃತ್ಯ ಎಸಗಿದ್ದಾರೆ. ಅಂಗನವಾಡಿಗೆ ಕಳುಹಿಸಲು ಭಯಪಡುವಂತಾಗಿದೆ’ ಎಂದು ಮಗುವಿನ ತಾಯಿ ಮುನಿಯಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.