ಮಾಲೂರು: ನಗರದ ಪೋಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ರಾಮಯ್ಯ ಗುತ್ತೇರ್ ಅಧ್ಯಕ್ಷತೆಯಲ್ಲಿ ದಲಿತ ಕಂದುಕೊರತೆಗಳ ಸಭೆ ಸೋಮವಾರ ನಡೆಯಿತು.

ಸಭೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಯಲು ಮತ್ತು ಕ್ರಮ ಕೈಗೊಳ್ಳಲು ಪೊಲೀಸ್ ಠಾಣಾ ಮಟ್ಟದಲ್ಲಿ ನಿಯಮಿತವಾಗಿ ಸಭೆ ನಡೆಸುವುದು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮರಾಟ. ಶಾಲಾ ಕಾಲೇಜುಗಳ ಬಳಿ ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ಪೋಲೀಸ್ ಬೀಟ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ವೃತ್ತ ನಿರೀಕ್ಷಕ ರಾಮಯ್ಯ ಗುತ್ತೇರ್ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಠಾಣೆಯಲ್ಲಿ ದಲಿತ ಕಂದುಕೊರತೆ ಸಭೆ ನಡೆಸಲಾಗುವುದು. ಜೊತೆಗೆ ಮಾಲೂರು ತಾಲ್ಲೂಕನ್ನು ಗಾಂಜಾ ಹಾಗೂ ಜೂಜಾಟದಿಂದ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನಿಸಲಾಗುವುದು. ಜೊತೆಗೆ ಸಭೆಯಲ್ಲಿ ಚರ್ಚೆ ನಡೆದ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ ಎಂದರು.

ಶಾಂತಮ್ಮ, ಎಸ್. ಎಂ.ವೆಂಕಟೇಶ್, ಆಲಂಬಾಡಿ ಎಂ.ಗೋಪಾಲ್, ಪಿ.ಎನ್.ದಾಸ್, ತಿಪ್ಪಸಂದ್ರ ಶ್ರೀನಿವಾಸ್, ಎಟ್ಟಕೋಡಿ ವೆಂಕಟೇಶ್, ಮುರಳೀಧರ್, ಹುಂಗೇನಹಳ್ಳಿ ವೆಂಕಟೇಶ್, ಮಾರುತೇಶ್, ಸೊಣ್ಣೂರು ಗೋವಿಂದ್, ಚಿಕ್ಕತಿರುಪತಿ ಆಕಾಶ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-18-917868907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.