ಕೋಲಾರ: ಬಿಜೆಪಿ, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಅವರಿಗೆ ಮಾನಸಿಕವಾಗಿ ಏನೋ ಸಮಸ್ಯೆ ಇದ್ದು ಏನೇನೋ ಮಾತನಾಡುತ್ತಿದ್ದಾರೆ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಹರಿಹಾಯ್ದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ನಿಂದ ಹೂಡಿ ವಿಜಯಕುಮಾರ್, ಬಿಜೆಪಿಯಿಂದ ಮಂಜುನಾಥಗೌಡ ಸ್ಪರ್ಧಿಸಿದರೂ ನಾನು ಭಯಪಡಲ್ಲ. ಅಥವಾ ಪ್ರತ್ಯೇಕವಾಗಿ, ಸ್ವತಂತ್ರವಾಗಿ ಸ್ಪರ್ಧಿಸಿದರೂ, ಕಿತ್ತಾಡಿಕೊಂಡರೂ ಹೆದರಲ್ಲ. ಅವರಿಗೆ ಭಯ ಇರಬಹುದು. ಕಾಂಗ್ರೆಸ್ ಟಿಕೆಟ್ ನನಗೆ ಸಿಗಲಿದ್ದು, 2028ಕ್ಕೆ ಮತ್ತೆ ಗೆದ್ದು ಬರುತ್ತೇನೆ’ ಎಂದರು.

ಜೆಡಿಎಸ್ನಿಂದ ಮಾಲೂರು ಕ್ಷೇತ್ರದಲ್ಲಿ ಹೂಡಿ ವಿಜಯಕುಮಾರ್ ಅವರಿಗೆ ಟಿಕೆಟ್ ಸಿಗಬಹುದೆಂಬ ಆತಂಕ ಮಂಜುನಾಥಗೌಡರಿಗೆ. ಏಕೆಂದರೆ ಮಾಜಿ ಶಾಸಕರಾಗಿರುವ ಅವರು ಬಿಜೆಪಿಯಿಂದ ಟಿಕೆಟ್ ತಮಗೆ ಎಂದುಕೊಂಡಿದ್ದಾರೆ. ಯಾರಿಗಾದರೂ ಟಿಕೆಟ್ ಕೊಡಲಿ; ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದರು.

ನಾನು ಮಾಲೂರಿನವನು, ಸ್ಥಳೀಯ ವ್ಯಕ್ತಿ, ರಿಯಲ್ ರಾಜಕಾರಣಿ. ಅವರಲ್ಲಿ ಒಬ್ಬರು ಬೆಂಗಳೂರಿನವರು, ಇನ್ನೊಬ್ಬರು ಕೋಡಿಹಳ್ಳಿಯವರು. ಮಂಜುನಾಥಗೌಡ ಹಾಗೂ ಹೂಡಿ ಇಬ್ಬರೂ ರಿಯಲ್ ಎಸ್ಟೇಟ್ ಗಿರಾಕಿಗಳು. ಎಲ್ಲೆಲ್ಲಿ ಜಮೀನು ಇದೆ, ಗೋಮಾಳ ಎಲ್ಲಿದೆ, ಹೇಗೆ ದಾಖಲಿ ಸೃಷ್ಟಿ ಮಾಡಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತು. ಈ ವಿಚಾರ ನನಗೆ ಗೊತ್ತಿಲ್ಲ ಎಂದರು.

ಚನ್ನಿಗರಾಯಪುರ ಇರಬಹುದು, ಅಗಲಕೋಟೆಯ ಭೂ ಪ್ರಕರಣ ಇರಬಹುದು. ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗುತ್ತದೆ ಎಂದು ಭರವಸೆ ನೀಡಿದರು.

ಮಂಜುನಾಥಗೌಡ ಮಾತನಾಡಿರುವುದನ್ನು ನಾನು ಗಮನಿಸಿದ್ದೇನೆ. ನಾನು ಕುಮಾರಸ್ವಾಮಿ ಅವರಿಗೆ ಹತ್ತಿರವಾಗಿದ್ದೇನೆ, ಇ.ಡಿ ವಿಚಾರದಲ್ಲಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ಗೆ ಅನುಕೂಲ ಮಾಡಿಕೊಡಲು ಜೆಡಿಎಸ್ಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂದೆಲ್ಲಾ ಹೇಳಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬೀಳಿಸಲು ಮಂಜುನಾಥಗೌಡ ಯಾವ ರೀತಿ ದ್ರೋಹ ಮಾಡಿದರು? ಯಾರನ್ನು ಎಲ್ಲಿಗೆ ಕರೆದುಕೊಂಡು ಹೋಗಿ ಬಿಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಮಾರ್ಕಂಡೇಯ ಜಲಾಶಯ ಬಿಜೆಪಿ ಸರ್ಕಾರದ ಕೃಷ್ಣಯ್ಯ ಶೆಟ್ಟಿ ಮಂತ್ರಿ ಆಗಿದ್ದಾಗ ಕೈಗೊಂಡಿದ್ದ ಯೋಜನೆ. ಸುಮಾರು ₹ 45 ಕೋಟಿ ಖರ್ಚು ಮಾಡಿದ್ದು, 156 ಹಳ್ಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ. ನಾನು ಶಾಸಕನಾದ ಮೇಲೆ ನೀರು ಪಂಪ್ ಮಾಡಿಸಲಾಯಿತು. ಸರಿಯಾಗಿ ಪೈಪ್ ಲೈನ್ ಇಲ್ಲದ ಕಾರಣ ಕೆಲವೆಡೆ ನೀರು ಹೋಗಲಿಲ್ಲ. ಈಗ ಎಲ್ಲಾ ಕಡೆ ನಿಂತು ಹೋಗಿದೆ ಎಂದರು.

ಏನು ಸಮಸ್ಯೆ ಇದೆ ಎಂಬುದರ ಬಗ್ಗೆ ತನಿಖೆ ಆಗಬೇಕು. ಹೀಗಾಗಿ, ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಪೈಪ್ಲೈನ್ ಆಗಬೇಕೇ ಅಥವಾ ಬೋಗಸ್ ಬಿಲ್ ಆಗಿದೆಯೇ ಎಂಬುದು ಗೊತ್ತಾಗಬೇಕು. ಈ ಯೋಜನೆ ಪೂರ್ಣಗೊಂಡರೆ ತಾಲ್ಲೂಕಿಗೆ ಸಾಕಾಗುವಷ್ಟು ನೀರು ಪೂರೈಸಬಹುದು ಎಂದು ಹೇಳಿದರು.

ಏಪ್ರಿಲ್ 1ಕ್ಕೆ ಮಾಲೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ. ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ನಡೆಯಲಿದೆ ಎಂದರು.

ಕೋಮುಲ್ನಲ್ಲಿ ಮೊಬೈಲ್ ನಿಷೇಧಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿ, ‘ಕೆಲಸ ಮಾಡುವಾಗ ಮೊಬೈಲ್ ನೋಡಿಕೊಂಡು ವಿಳಂಬ ಮಾಡುತ್ತಾರೆ. ನಮ್ಮಲ್ಲಿ ಮಾತ್ರವಲ್ಲ; ಬೇರೆ ಒಕ್ಕೂಟಗಳಲ್ಲೂ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಹೀಗಾಗಿ, ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ’ ಎಂದರು.

ಕೋಲಾರ ಹಾಲು ಒಕ್ಕೂಟದ ಆವರಣದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ ಕಾರ್ಮಿಕರು ಮೊಬೈಲ್ ಬಳಸುವುದನ್ನು ಆಡಳಿತ ಮಂಡಳಿ ನಿಷೇಧಿಸಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಈಚೆಗೆ ವಿಶೇಷ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.