ಮಾಲೂರು: ನಗರಸಭೆ ವ್ಯಾಪ್ತಿಯಲ್ಲಿ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದ, ಅಂಗಡಿಗಳ ಬಾಡಿಗೆ ವಸೂಲಿಗೆ ನಗರಸಭೆ ಪೌರಾಯುಕ್ತ ಎಂ.ಎಸ್.ಮಹದೇವ್ ನೇತೃತ್ವದಲ್ಲಿ ತೆರಳಿದ ನಗರಸಭಾ ಅಧಿಕಾರಿಗಳು ಬಾಡಿಗೆ ನೀಡದ ಅಂಗಡಿ ಮಳಿಗೆಗಳಿಗೆ ಬೀಗ ಹಾಕಿದ್ದಾರೆ.

ಬಳಿಕ ಎಂ.ಎಸ್.ಮಹದೇವ್ ಮಾತನಾಡಿ,ನಗರಸಭೆಯಿಂದ ಬಹಿರಂಗ ಹರಾಜಿನಲ್ಲಿ ಅಂಗಡಿ ಮಳಿಗೆಗಳನ್ನು ಪಡೆದ ಬಾಡಿಗೆದಾರರು ಪ್ರತಿ ತಿಂಗಳು ನಗರಸಭೆಗೆ ಬಾಡಿಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ಶೇ 2ರಷ್ಟು ದಂಡ ವಿಧಿಸಲಾಗುವುದು. ಹಾಗಾಗಿ ಸಕಾಲದಲ್ಲಿ ಬಾಡಿಗೆ ಪಾವತಿಸಿ ಎಂದು ತಿಳಿಸಿದರು.

ನಗರಸಭಾ ವ್ಯಾಪ್ತಿಯಲ್ಲಿ 151 ಅಂಗಡಿ ಮಳಿಗೆಗಳ ಪೈಕಿ ನಗರಸಭೆಗೆ ವರ್ಷಕ್ಕೆ ₹112 ಲಕ್ಷ ಬಾಡಿಗೆ ಹಣ ಸಂದಾಯವಾಗಬೇಕಾಗಿದೆ. 2025-26ನೇ ಸಾಲಿನಲ್ಲಿ ₹105 ಲಕ್ಷ ಅಂದರೆ ಶೇ 93ರಷ್ಟು ಬಾಡಿಗೆ ಹಣ ವಸೂಲಾಗಿದೆ. ಆರು ಅಂಗಡಿ ಮಳಿಗೆಗಳ ₹6.75 ಲಕ್ಷ ಬಾಡಿಗೆ ಹಣ ಬಾಕಿ ಇದೆ. ಬಾಕಿ ಬಾಡಿಗೆ ವಸೂಲಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರಳಿದಾಗ ಮೂರು ಅಂಗಡಿಯವರು ₹2.81 ಲಕ್ಷ ಪಾವತಿಸಿದ್ದಾರೆ. ಉಳಿದ ಮೂರು ಅಂಗಡಿಯವರು ಬಾಡಿಗೆ ಪಾವತಿಸಿಲ್ಲ. ಹಾಗಾಗಿ ಬಾಡಿಗೆದಾರರಿಗೆ ಎಚ್ಚರಿಕೆ ನೀಡಿ ಬೀಗ ಜಡಿಯಲಾಗಿದೆ ಎಂದು ತಿಳಿಸಿದರು.

ಮೂಲ ಬಾಡಿಗೆದಾರರು ಯಾವುದೇ ಕಾರಣಕ್ಕೂ ಸಬ್ ಲೀಸ್ಗೆ ನೀಡಿದ್ದಲ್ಲಿ ನಿಮ್ಮ ಅಂಗಡಿಯನ್ನು ಮುಟ್ಟುಗೋಲು ಹಾಕಿ, ಮರು ಹರಾಜು ಮಾಡಲಾಗುವುದು ಎಂದು ಬಾಡಿಗೆದಾರರಿಗೆ ಕಿವಿಮಾತು ಹೇಳಿದರು.

ಈ ವೇಳೆ ನಗರಸಭೆಯ ಕಂದಾಯ ಅಧಿಕಾರಿ ಅನಿಲ್, ಕಂದಾಯ ನಿರೀಕ್ಷಕ ಅನಿಲ್, ಸಿಬ್ಬಂದಿ ವಿನೋದ್, ಮಂಜು, ಸತೀಶ್, ಸುಹಾಸ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-18-1382579091

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.