ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ತೆರವಾದ ಗ್ರಾ.ಪಂ. ಕ್ಷೇತ್ರಗಳಿಗೆ ಮತದಾನ

Last Updated 26 ಫೆಬ್ರುವರಿ 2023, 6:02 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಬಾಳಿಗಾನಹಳ್ಳಿ ಹಾಗೂ ಅರಳೇರಿ ಗ್ರಾ.ಪಂ.ನಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು. ಬಾಳಿಗಾನಹಳ್ಳಿಯಲ್ಲಿ ಶೇ 91.9 ಹಾಗೂ ಅರಳೇರಿಯಲ್ಲಿ ಶೇ 91.9ರಷ್ಟು ಮತದಾನವಾಗಿದೆ.

ಅರಳೇರಿ ಗ್ರಾಮದಲ್ಲಿ ಎಸ್‌.ಸಿ ಮೀಸಲು ಕ್ಷೇತ್ರದ ಗ್ರಾ.ಪಂ. ಸದಸ್ಯೆ ಯಲ್ಲಮ್ಮ ಗೋಪಾಲಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಮತದಾನ ನಡೆಯಿತು.‌

ಅರಳೇರಿ ಗ್ರಾಮದ ಸದಸ್ಯೆಯಾಗಿದ್ದ ಯಲ್ಲಮ್ಮ ಗೋಪಾಲಪ್ಪ ಅವರು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಎರಡು ಕೊಠಡಿಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT