ಮಾಲೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಆಗಿ ಕೊಂಡ್ರಹಳ್ಳಿ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಸಿ.ಎಂ. ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಲೂರು ಘಟಕದ ಕಾರ್ಯಕಾರಿ ಸಮಿತಿಗೆ 14 ಮಂದಿ ಆಯ್ಕೆಯಾಗಿದ್ದು, ಪದಾಧಿಕಾರಿಗಳ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರಿಂದಾಗಿ ಪದಾಧಿಕಾರಿಗಳ ಸ್ಥಾನದ ಚುನಾವಣಾ ಫಲಿತಾಂಶ ಪ್ರಕಟವಾಗಿರಲಿಲ್ಲ.

ಇದೀಗ ನ್ಯಾಯಾಲಯದ ಆದೇಶದಂತೆ ಪದಾಧಿಕಾರಿಗಳ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದವರ ಪಟ್ಟಿಯನ್ನು ಚುನಾವಣಾಧಿಕಾರಿ ವೀರಭದ್ರಚಾರಿ ಪ್ರಕಟಿಸಿದ್ದಾರೆ.

ತಾಲ್ಲೂಕಿನ ಕೊಂಡ್ರಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕ ಸಿ.ಎಂ. ನಾರಾಯಣಸ್ವಾಮಿ (ಅಧ್ಯಕ್ಷ) ಮುನಿಯಪ್ಪ ಜಿ (ಉಪಾಧ್ಯಕ್ಷ), ಕಾಂತಮ್ಮ ವಿ (ಉಪಾಧ್ಯಕ್ಷೆ), ರವಿಕುಮಾರ್ (ಪ್ರಧಾನ ಕಾರ್ಯದರ್ಶಿ), ಸುರೇಶ ಎಚ್.ಇ (ಖಜಾಂಚಿ), ಟೇಕಲ್ ಶಶಿಧರ (ಸಹ ಕಾರ್ಯದರ್ಶಿ), ಕೆ. ಚಂದ್ರಕಲಾ (ಕಾರ್ಯದರ್ಶಿ), ಶ್ರೀನಾಥ್ ಆಜಾದ್ (ಸಂಘಟನಾ ಕಾರ್ಯದರ್ಶಿ), ಲಕ್ಷ್ಮಿ ಎನ್ (ಮಹಿಳಾ ಸಂಘಟನಾ ಕಾರ್ಯದರ್ಶಿ) ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜಮ್ಮ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಂ. ರವಿ ಬಡ್ತಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಮುನಿ ನಾರಾಯಣ ಬಡ್ತಿ, ವೆಂಕಟೇಶಗೌಡ, ನಂದೀಶ್ ಎಂಜಿ, ನಾಗರಾಜ್, ಅಮರ್, ಸಂಜೀವಪ್ಪ, ರಮೇಶ್, ಅನ್ಸರ್, ಶ್ರೀಧರ್ ರೆಡ್ಡಿ, ವೆಂಕಟರಮಣ, ಜಯರಾಮ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-18-1968909293

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.