ಮಾಲೂರು: ನಗರದ ದೊಡ್ಡಪೇಟೆಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ತಾಲ್ಲೂಕು ಆರ್ಯ ವೈಶ್ಯ ಸಮಾಜದ ವತಿಯಿಂದ ವಾಸವಿ ಜಯಂತ್ಯುತ್ಸವ ನಡೆಯಿತು.

ಈ ವೇಳೆ ಶಾಸಕ ಕೆ.ವೈ.ನಂಜೇಗೌಡ ಕನ್ನಿಕಾ ಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ತಾಲ್ಲೂಕಿನಲ್ಲಿ ಆರ್ಯವೈಶ್ಯ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದರೂ ಒಗ್ಗಟ್ಟಾಗಿದ್ದಾರೆ. ಪ್ರತಿ ವರ್ಷ ವಾಸವಿ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಆರ್ಯವೈಶ್ಯ ಸಮುದಾಯದವರು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿ ತಮ್ಮ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಜೀವನದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದ್ದಾರೆ ಎಂದರು.

ಸಮುದಾಯದವರ ಮನವಿ ಮೇರೆಗೆ ದೊಡ್ಡಪೇಟೆ ರಸ್ತೆಗೆ ವಾಸವಿ ದೇವಾಲಯ ರಸ್ತೆಯನ್ನಾಗಿ ನಾಮಕರಣ ಮಾಡಲು ನಗರಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣ ಮಾಡಲಾಗುತ್ತಿದ್ದೆ. ಜೊತೆಗೆ ರಸ್ತೆಗಳಿಗೆ ಐ ಮಾಸ್ಟ್ ದೀಪಗಳನ್ನು ಅಳವಡಿಸಲಾಗುವುದು ಎಂದರು.

ಆನೆಪುರ ಹನುಮಂತಪ್ಪ, ಕೋಮುಲ್ ನಿರ್ದೇಶಕ ಶ್ರೀನಿವಾಸ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಮೂರ್ತಿ, ನಗರಸಭೆ ಮಾಜಿ ಸದಸ್ಯ ಹನುಮಂತರೆಡ್ಡಿ, ಮಂಜುನಾಥ್, ಚಂದ್ರಗುಪ್ತ, ಬಿಹಾರ್ ಲಕ್ಷ್ಮಿನಾರಾಯಣ ಶೆಟ್ಟಿ, ಪ್ರಸಾದ್, ಶೈಲೇಶ್, ಪಾಲೂರು ನವೀನ್ ಕುಮಾರ್, ಎಂ.ಆರ್.ಬಾಲಾಜಿ, ಎಂ.ವಿ.ಸುಂದರ್, ಎಂ.ವಿ.ರಮೇಶ್ ಬಾಬು, ಆರ್.ವಿ.ಮಧು, ಭರತ್ ಭೂಷಣ್, ಕಾರ್ತಿಕ್, ಆರ್.ವಿ. ಆನಂದ್, ಕೌಸ್ತುಭ್, ರಘು, ಸಂದೀಪ್, ಗಾಯಿತ್ರಿ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-18-450325751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.