ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿಗೆ ಮಂಡಿ ಮಾಲೀಕರ ಅಸಹಕಾರ

ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳ ತಂಡ ಭೇಟಿ, ರೈತರಿಂದ ಧರಣಿ ನಡೆಸಲು ಯತ್ನ
Last Updated 31 ಡಿಸೆಂಬರ್ 2019, 12:04 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ (ಕಾನೂನು ಜಾರಿ ಘಟಕ) ಹೆಚ್ಚುವರಿ ನಿರ್ದೇಶಕ ಬಿ.ಎಂ.ಶ್ರೀನಿವಾಸ್ ಅವರು, ನಗರದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗ ಮಂಡಿ ಮಾಲೀಕರು ಮಾಹಿತಿ ನೀಡದೆ ಅಸಹಕಾರ ತೋರಿದರು.

ಇಲ್ಲಿನ ಎಪಿಎಂಸಿಯಲ್ಲಿ ಮಂಡಿ ಮಾಲೀಕರು ಮತ್ತು ದಲ್ಲಾಳಿಗಳಿಂದ ರೈತರ ಮೇಲೆ ಆಗುತ್ತಿರುವ ಶೋಷಣೆ ಸಂಬಂಧ ಹೈಕೋರ್ಟ್‌ ವಕೀಲ ಶಿವಪ್ರಕಾಶ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿರುವ ಹಿನ್ನಲೆಯಲ್ಲಿ ಭೇಟಿ ನೀಡಿದರು.

ಎಪಿಎಂಸಿ ಮಾರುಕಟ್ಟೆ ಯಾರ್ಡ್‌ನ ಆವರಣದಲ್ಲಿನ ಎಸ್‌ಬಿಟಿ ಮಂಡಿ ಸೇರಿದಂತೆ ಹಲವು ಮಂಡಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಿಳಿ ಚೀಟಿ ವಿತರಣೆ ಮಾಡುತ್ತಿದದ್ದು ಪತ್ತೆಯಾಯಿತು. ಇದಕ್ಕೆ ಆಕ್ರೋಶಗೊಂಡ ಮಂಡಿ ಮಾಲೀಕರು, ರೈತರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಮಧ್ಯ ಪ್ರವೇಶ ಮಾಡಿ, ರೈತರು ಧರಣಿ ನಡೆಸಲು ಮುಂದಾದಾಗ ಸಮಾಧಾನಪಡಿಸಿ, ಧರಣಿ ವಾಪಸ್ಸು ಪಡೆಯುವಂತೆ ಮಾಡಿದರು. ಆನಂತರ ಎಪಿಎಂಸಿ ಕಚೇರಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಮಂಡಿ ಮಾಲೀಕರ ಜತೆ ಚರ್ಚಿಸಿ ಸಮಸ್ಯೆಗಳನ್ನು ಅಲಿಸಿದರು.

ಮುಸುಕಿನ ವ್ಯಾಪಾರ ನಡೆಯುತ್ತಿಲ್ಲ

ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಮಾತನಾಡಿ, ‘ಕಮೀಷನ್ ಸಂಬಂಧ ವ್ಯಾಪಾರಸ್ಥರು, ರೈತರನ್ನು ಕರೆಯಿಸಿ ಮಾತನಾಡಲಾಗಿದೆ. ಈ ಮಾರುಕಟ್ಟೆಯಲ್ಲಿ ಮೋಸ ಮಾಡುವ ಕೆಲಸ ಅಗಲಿ, ಮುಸುಕಿನ ವ್ಯಾಪಾರ ಇಲ್ಲಿ ನಡೆಯುತ್ತಿಲ್ಲ’ ಎಂದು ತಿಳಿಸಿದರು.

‘ಹಿಂದೆಯೇ ಅನೇಕ ಮಂದಿ ಅಧಿಕಾರಿಗಳು ಅನೇಕ ಮಂಡಿಗಳಿಗೆ ಭೇಟಿ ನೀಡಿದಾಗ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಳಿ ಚೀಟಿ ನೀಡುತ್ತಿರುವುವನ್ನು ಪ್ರಶ್ನಿಸಿ ರಾಜ್ಯ ಮಟ್ಟದಲ್ಲಿ ತೀರ್ಮಾನಿಸಿ ಹೆಸರು ಇರುವ ಚೀಟಿ ನೀಡುವಂತೆ ಮಾಲೀಕರಿಗೆ ಸೂಚಿಸಲಾಯಿಗಿದ್ದ, ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ (ಕಾನೂನು ಜಾರಿ ಘಟಕ) ಹೆಚ್ಚುವರಿ ನಿರ್ದೇಶಕ ಬಿ.ಎಂ.ಶ್ರೀನಿವಾಸ್ ಮಾತನಾಡಿ, ‘ಕೋಲಾರ ಹಾಗೂ ಮುಳಬಾಗಿಲಿನ ವಡ್ಡಹಳ್ಳಿ ಎಪಿಎಂಸಿಯಲ್ಲಿ ಮಂಡಿ ಮಾಲೀಕರು ಮತ್ತು ದಲ್ಲಾಳಿಗಳಿಂದ ರೈತರ ಮೇಲೆ ಆಗುತ್ತಿರುವ ಶೋಷಣೆ ಸಂಬಂಧ ಹೈಕೋರ್ಟ್‌ ವಕೀಲ ಶಿವಪ್ರಕಾಶ್‌್ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದು, ಜ.20ರಂದು ವಿಚಾರಣೆ ಇರುವುದರಿಂದ ವರದಿ ಸಲ್ಲಿಸಬೇಕಾಗಿದೆ’ ಎಂದು ತಿಳಿಸಿದರು.

ಮಾರುಕಟ್ಟೆ ಪರವಾಗಿಯು ಇದೆ

‘ಎಪಿಎಂಸಿ ಮಾರುಕಟ್ಟೆಗೆ ಜಾಗ ಸಕಾಗುವುದಿಲ್ಲ, ಒಟ್ಟು ಜಾಗ 20 ಎಕರೆ ವಿಸ್ತೀರ್ಣವಿದ್ದು, ಆ ಪೈಕಿ 12 ಎಕರೆಯಲ್ಲಿ ಮಾತ್ರ ಮಾರುಕಟ್ಟೆ ನಡೆಯುತ್ತಿದ್ದು, 200 ಎಕರೆ ಜಾಗದಲ್ಲಿ ಮಾರುಕಟ್ಟೆ ನಡೆಸಲು ಒತ್ತಾಯಿಸಿದ್ದಾರೆ. ಇಲ್ಲಿ ಕುಡಿಯುವ ನೀರಿಲ್ಲ, ಸ್ವಚ್ಛತೆಯಿಲ್ಲ. ಪಿಎಎಲ್‌ ಮಾರುಕಟ್ಟೆ ಪರವಾಗಿಯೂ ಇದೆ’ ಎಂದು ಸ್ಪಷ್ಟಪಡಿಸಿದರು.

‘ಎಪಿಎಂಸಿಗೆ ಜಾಗ ಸಮಸ್ಯೆಯಿದೆ, ರೈತರಿಂದ ಕಮಿಷನ್ ಪಡೆದುಕೊಳ್ಳಲಾಗುತ್ತಿದೆ ಎಂದು ಮುಖ್ಯವಾಗಿ ಪಿಎಎಲ್‌ನಲ್ಲಿ ನಮೂದು ಮಾಡಿದ್ದಾರೆ. ಟೊಮೆಟೊ ಉತ್ಪಾದನೆ ಹೆಚ್ಚಾಗಿ ಅಗುತ್ತಿರುವುದರಿಂದ ಜಾಗ ಸಮಸ್ಯೆ ಇದೆ, ರೈತರು ಉತ್ಪಾದಿಸಿದ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡುವ ಅವಕಾಶ ಕಲ್ಪಿಸಲಾಗಿದೆ. ಖರೀದಿ ಮಾಡಲು ನಮಗೆ ಅವಕಾಶವಿಲ್ಲ’ ಎಂದು ಹೇಳಿದರು.

ಎಪಿಎಂಸಿ ನಿರ್ದೇಶಕ ದೇವರಾಜ್, ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಶ್ರೀನಿವಾಸ್, ಸಹಾಯಕ ಕಾರ್ಯದರ್ಶಿ ವಿಜಯ್‌ಕುಮಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT