ಕುಬ್ಜರ ಕಲ್ಯಾಣ

7

ಕುಬ್ಜರ ಕಲ್ಯಾಣ

Published:
Updated:
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಿಲ್ ಕುಮಾರ್ ಮತ್ತು ವರಲಕ್ಷ್ಮೀ

ಮಾಲೂರು: ತಾಲ್ಲೂಕಿನ ಯಶವಂತಪುರ ಗ್ರಾಮದ 2.5 ಅಡಿ ಎತ್ತರದ ಅನಿಲ್ ಕುಮಾರ್ ಹಾಗೂ ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಎರಡು ಅಡಿ ಎತ್ತರದ ವರಲಕ್ಷ್ಮೀ ಹೊಸಕೋಟೆ ತಾಲ್ಲೂಕು ಜಡಿಗೇನಹಳ್ಳಿ ಗ್ರಾಮದ ಕಾಲಭೈರವೇಶ್ವರಸ್ವಾಮಿ ದೇಗುಲದಲ್ಲಿ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಕುಬ್ಜ ಜೋಡಿಯ ವಿವಾಹ ಗಮನ ಸೆಳೆಯಿತು. ವಾದ್ಯಗೋಷ್ಠಿ ತಂಡದಲ್ಲಿ ನೃತ್ಯ ಮಾಡುವ ವರಲಕ್ಷ್ಮೀ ತಾಲ್ಲೂಕಿನ ಹನುಮನಾಯಕನಹಳ್ಳಿಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ಅನಿಲ್ ಕುಮಾರ್‌ಗೆ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗಿದೆ. ಅನಿಲ್ ಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ ಅನಿಲ್ ಕುಮಾರ್ ತನ್ನ ತಾಯಿಯ ಬಳಿ ಈ ಬಗ್ಗೆ ತಿಳಿಸಿದ್ದಾರೆ. ಎರಡೂ ಕಡೆಯ ಕುಟುಂಬ ಸದಸ್ಯರು ಮಾತುಕತೆ ನಡೆಸಿ ವಿವಾಹ ನಿಶ್ಚಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !