ಶನಿವಾರ, ಫೆಬ್ರವರಿ 29, 2020
19 °C

ಕೋಲಾರ: ಭಕ್ತರಿಂದ ತ್ರಿವಿಧ ದಾಸೋಹಿಯ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಶ್ರೀಶಿವಕುಮಾರ ಸ್ವಾಮಿಜಿ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ನಗರದಲ್ಲಿ ಶ್ರೀಶಿವಕುಮಾರ ಸ್ವಾಮಿಜಿ ಭಕ್ತರು ಎನ್.ಪಾಂಡುರಂಗ ನೇತೃತ್ವದಲ್ಲಿ ಭಾನುವಾರ ಅನ್ನ ದಾಸೋಹ ಕಾರ್ಯಕ್ರಮ ನಡೆಯಿತು.

ಶ್ರೀಶಿವಕುಮಾರ ಸ್ವಾಮಿಜಿ ತ್ರಿವಿಧ ದಾಸೋಹಿಗಳಾಗಿ ಹೆಸರುವಾಸಿಯಾಗಿದ್ದು, ಅವರ ಮೊದಲ ಪುಣ್ಯ ಸ್ಮರಣೆ ಅಂಗವಾಗಿ ಅನ್ನದಾನ ಏರ್ಪಡಿಸಲಾಗಿತ್ತು.

ಮುಖಂಡ ಎನ್.ಪಾಂಡುರಂಗ ಮಾತನಾಡಿ, ‘ಸ್ವಾಮಿಜಿ ಅವರು ನಮ್ಮ ಆರಾಧ್ಯದೈವ. ಅವರು ಇನ್ನೂ ನಮ್ಮೊಂದಿಗೆ ಇದ್ದಾರೆ. ಅವರಿಲ್ಲ ಎಂಬ ಭಾವನೆಯೇ ನಮಗೆ ಬಂದಿಲ್ಲ, ಅವರ ಅನ್ನದಾನ, ವಿದ್ಯಾದಾನಕ್ಕೆ ಸಾಟಿಯೇ ಇರಲಿಲ್ಲ’ ಎಂದರು.

‘ಅವರನ್ನು ಸ್ಮರಿಸುವ ಅವಕಾಶ ನಮಗೆ ಸಿಕ್ಕಿರುವುದಕ್ಕೆ ಸಂತಸವಾಗಿದೆ. ಪ್ರತಿ ವರ್ಷವೂ ಅವರ ಪುಣ್ಯಸ್ಮರಣೆಯನ್ನು ಮಾಡಿಕೊಂಡು ಹೋಗಲಾಗುವುದು’ ಎಂದು ಪ್ರಕಟಿಸಿದರು.

ಮುಖಂಡರಾದ ಲೀಲಾವತಿ, ಮುನಿವೆಂಕಟಯಾದವ್, ಮುನಿಕೃಷ್ಣ, ವಿನಯ್, ಮಲ್ಲಣ್ಣ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)