ಬಂಗಾರಪೇಟೆ: ತಾಲ್ಲೂಕಿನ ಚಿಕ್ಕಕಳವಂಚಿ ಗ್ರಾಮದಲ್ಲಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಎಸ್.ಎನ್. ಬಳಿಕ ನಾರಾಯಣಸ್ವಾಮಿ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರವಾಗಿರುವ ಚಿಕ್ಕಕಳವಂಚಿಯಲ್ಲಿ ದ್ರೌಪದಿ ದೇವಿ ಸಮೇತ ಧರ್ಮರಾಯ ಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಈ ವೇಳೆ ದೂರದ ಊರಿಂದ ಬರುವ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ಸಮುದಾಯ ಭವನದ ಅಗತ್ಯವಿತ್ತು. ಹಾಗಾಗಿ ಸಾರ್ವಜನಿಕರ ಬೇಡಿಕೆಯಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಮುದಾಯ ಭವನ ಕೇವಲ ಜಾತ್ರೆಗೆ ಮಾತ್ರವಲ್ಲದೆ, ಮದುವೆ, ಉಪನಯನ ಹಾಗೂ ಸಮಾಜದ ವಿವಿಧ ಸಭೆ-ಸಮಾರಂಭಗಳಿಗೆ ಕಡಿಮೆ ವೆಚ್ಚದಲ್ಲಿ ಸ್ಥಳಾವಕಾಶ ಸಿಗಲಿದೆ. ನಿಗದಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದರು.

ಮುನೀರಪ್ಪ, ಆದಿ ನಾರಾಯಣ ಕುಟ್ಟಿ, ಪ್ರಭಾಕರ್ ರೆಡ್ಡಿ, ಜಯಣ್ಣ, ಲಕ್ಷ್ಮಿ ನಾರಾಯಣ ಪ್ರಸಾದ್, ವಿ.ಶಂಕರ್, ಹಂಸಾನಂದ , ವರದರಾಜ, ಶಿವಕುಮಾರ್, ವೆಂಕಟೇಶ್, ರಾಮಪ್ಪ, ಚಲಪತಿ, ವೆಂಕಟಮುನಿಯಪ್ಪ, ಬಾಲಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.