ಬುಧವಾರ, ಸೆಪ್ಟೆಂಬರ್ 30, 2020
22 °C
ಸಿಐಟಿಯು, ಕೆಪಿಆರ್‌ಎಸ್‌ನಿಂದ ಕೋಲಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

ಬದುಕಿನ ರಕ್ಷಣೆಗೆ ಚಳವಳಿ ಅಗತ್ಯ: ಟಿ.ಎಂ ವೆಂಕಟೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಬದುಕನ್ನು ರಕ್ಷಿಸಲು ಐಕ್ಯ ಚಳವಳಿ ಅಗತ್ಯ ಎಂದು ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಹೇಳಿದರು.

ರೈತ, ಕಾರ್ಮಿಕರ ಹಾಗೂ ಕೃಷಿ ಕೂಲಿಕಾರ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಸಿಐಟಿಯು ಮತ್ತು ಕೆಪಿಆರ್‌ಎಸ್‌ನಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ
ಮಾತನಾಡಿದರು.

ದೇಶವನ್ನು ಕಟ್ಟಿದ ರೈತ,ಕಾರ್ಮಿಕ, ಜನಸಾಮಾನ್ಯ ಹಾಗೂ ಮಹಿಳಾ ಕೂಲಿಕಾರರ ಬದುಕಿಗೆ,ಅವರ ಕುಟುಂಬಕ್ಕೆ ಭದ್ರತೆ ಇಲ್ಲದೆ ಕಳೆದ ಮೂರು ದಶಕಗಳಿಂದ ಜಾರಿಯಲ್ಲಿರುವ ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ನೀತಿಗಳಿಂದಾಗಿ ಜನಸಾಮಾನ್ಯರು ಬಲಿಪಶುಗಳಾಗಿದ್ದಾರೆ. ದೇಶದ ಶ್ರಮ ಜೀವಿಗಳ ಮೇಲೆ ಇಂತಹ ದಾಳಿಗಳನ್ನು ಒಂದು ವರ್ಗವಾಗಿ ಐಕ್ಯತೆಯಿಂದ ಎದುರಿಸಬೇಕು ಎಂದರು.

ಸರ್ಕಾರಗಳು ಈ ಕೂಡಲೇ ಪ್ರತಿಯೊಬ್ಬರನ್ನು ಉಚಿತವಾಗಿ ಕೊವಿಡ್ ಪರೀಕ್ಷೆಗೆ ಒಳಪಡಿಸಿ ಉಚಿತ ಔಷಧೋಪಚಾರ ಒದಗಿಸಬೇಕು. 6 ತಿಂಗಳು ತಿಂಗಳಿಗೆ ₹7,500 ಕೋವಿಡ್ ಪರಿಹಾರ ನೀಡಬೇಕು. ಕುಟುಂಬದ ಪ್ರತಿ ಸದಸ್ಯನಿಗೆ 10 ಕೆ.ಜಿ. ಉಚಿತ ಆಹಾರ ಧಾನ್ಯ ವಿತರಿಸಬೇಕು. ಉದ್ಯೋಗ ಖಾತ್ರಿ ವೇತನವನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಕೆಪಿಆರ್‌ಎಸ್ ತಾಲ್ಲೂಕು ಅಧ್ಯಕ್ಷ ಎನ್.ಎನ್ ಶ್ರೀರಾಮ್, ದೇವರಾಜ್, ವಿ.ನಾರಾಯಣರೆಡ್ಡಿ, ಗಂಗಮ್ಮ, ಉಪಾಧ್ಯಕ್ಷ ಯಲ್ಲಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಮುಖಂಡ ಆಶಾ, ಭೀಮರಾಜ್, ಅಪ್ಪಯ್ಯಣ್ಣ, ನಾಗರಾಜಪ್ಪ, ಮಂಜುಳಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.