ಮುಳಬಾಗಿಲು: ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ವಿಚಾರಧಾರೆ ಮತ್ತು ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದು ತಹಶೀಲ್ದಾರ್ ಬಿ.ಆರ್. ಮುನಿವೆಂಕಟಪ್ಪ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಜಗಜೀವನರಾಮ್ ಅವರ 37ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಬು ಜಗಜೀವನರಾಮ್ ಅವರು ಅಧಿಕಾರದಲ್ಲಿದ್ದಾಗ ಕ್ರಾಂತಿಕಾರಕ ಹಾಗೂ ಜನಪರ ಕಾರ್ಯಕ್ರಮ ಜಾರಿಗೊಳಿಸಿದ್ದರು. ಇಂತಹ ಸಮರ್ಥ ನಾಯಕರ ಸ್ಮರಣೆ ಜಯಂತಿಗೆ ಸೀಮಿತವಾಗಬಾರದು. ದಿನನಿತ್ಯ ಅವರನ್ನು ಮತ್ತು ಅವರ ವಿಚಾರಧಾರಗಳನ್ನು ಸ್ಮರಿಸುವಂತಾಗಬೇಕು ಎಂದು ಹೇಳಿದರು.
ವಕೀಲ ಜಯಪ್ಪ ಮಾತನಾಡಿ, ಬಾಬು ಜಗಜೀವನರಾಮ್ ಅವರು ರಕ್ಷಣಾ ಸಚಿವರಾಗಿ ಪ್ರಬುದ್ಧತೆಯಿಂದ ಕಾರ್ಯನಿರ್ವಹಿಸಿದರು. ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು. ಇಂತಹ ಪುಣ್ಯಾತ್ಮರ ಬದುಕು, ಬವಣೆ, ಹೋರಾಟ ಯುವ ಪೀಳಿಗೆ ಅರಿಯಬೇಕೆಂದು ಎಂದು ತಿಳಿಸಿದರು.
ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಮೋತಕಪಲ್ಲಿ ಸತೀಶ್, ವಕೀಲರ ಸಂಘದ ಅಧ್ಯಕ್ಷ ಸದಾಶಿವ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ್, ನಗರಸಭೆ ಸದಸ್ಯ ಪ್ರಸಾದ್, ಚೋಳಗುಂಟೆ ಚಲಪತಿ, ಮಾದಿಗ ದಂಡೋರ ನಗರಾಧ್ಯಕ್ಷ , ನಾಗರಾಜ್, ಖಜಾಂಚಿ ಸಿ. ರಮೇಶ್, ಶಿವಣ್ಣ, ನಾಗರಾಜ್, ಶೇಖರ್, ಎಂ.ಆರ್.ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.