ಮುಳಬಾಗಿಲು: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ತಾಲ್ಲೂಕಿನ ನಂಗಲಿ ಹಾಗೂ ಮುಳಬಾಗಿಲು ನಗರದಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಗಳು ಹಾಗೂ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ರಾಷ್ಟ್ರೀಯ ಏಕತಾ ಓಟದಲ್ಲಿ ಪಾಲ್ಗೊಂಡರು.

ತಾಲ್ಲೂಕಿನ ನಂಗಲಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ವರಸಿದ್ಧಿ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಸೇರಿ ಪೊಲೀಸ್ ಅಧಿಕಾರಿಗಳು ನಂಗಲಿ ಗ್ರಾಮದ ಮಲ್ಲೆಕುಪ್ಪ ರಸ್ತೆ, ಗಣೇಶನ ಗುಡಿ ಬೀದಿ, ಅಂಬೇಡ್ಕರ್ ರಸ್ತೆ, ನಾಗದೇವತಾ ಕಾಲೋನಿ, ರಾಷ್ಟ್ರೀಯ ಹೆದ್ದಾರಿ 75ರ ಸರ್ವೀಸ್ ರಸ್ತೆ ಮತ್ತಿತರರ ಬೀದಿಗಳಲ್ಲಿ ಓಟ ನಡೆಸಿದರು.

ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರೀಯ ಏಕತೆ, ಸಮಗ್ರತೆ, ನೈಜತೆ ಹಾಗೂ ರಾಷ್ಟ್ರಾಭಿಮಾನದ ಕುರಿತು ಪ್ರತಿಜ್ಞೆ ವಿಧಿ ಬೋಧಿಸಲಾಯಿತು.

ಮುಳಬಾಗಿಲು ನಗರದಲ್ಲಿ ಎ.ಎಸ್.ಪಿ ಮನೀಷಾ ಹಾಗೂ ನಗರ ಸರ್ಕಲ್ ಇನ್ಸ್ಪೆಕ್ಟರ್ ಸಂಘನಾಥ ನೇತೃತ್ವದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪಿಯು ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಏಕತಾ ಓಟ ನಡೆಸಿದರು.

ನಂಗಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ ಮಾತನಾಡಿ, ದೇಶದಲ್ಲಿ ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ನೈಜತೆಯನ್ನು ಕಾಪಾಡಿ ರಾಷ್ಟ್ರದ ಹಿತ ಕಾಯಲು ವಿದ್ಯಾರ್ಥಿಗಳು ಹಾಗೂ ದೇಶದ ಜನರು ಸದಾ ಸಿದ್ಧರಿರಬೇಕು. ಸಂಭಾವ್ಯ ಬೆದರಿಕೆಗಳನ್ನು ಎಲ್ಲರೂ ಏಕತೆಯಿಂದ ಎದುರಿಸಬೇಕು ಎಂದು ತಿಳಿಸಿದರು.

ಎ.ಎಸ್.ಪಿ ಮನಿಷಾ, ನಗರ ಠಾಣೆ ಇನ್ಸ್ಪೆಕ್ಟರ್ ಸಂಘನಾಥ, ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ, ನಾರಾಯಣಪ್ಪ, ಶಿವಶಂಕರ್, ಡಾ.ಟಿ.ಎಸ್. ಶ್ರೀನಿವಾಸ್, ಎಂ.ಎನ್.ಮೂರ್ತಿ, ಡಾ.ವಸುಂಧರ, ಆದಿನಾರಾಯಣ, ವೆಂಕಟೇಶ್, ಎಲ್.ಸೀನಪ್ಪ, ಶ್ರೀಧರ್, ನಂಗಲಿ ನಿರಂಜನ್, ಪಾಂಡುರಂಗಪ್ಪ, ಕಿಶೋರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.