ಮುಳಬಾಗಿಲು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಹನುಮನಹಳ್ಳಿ ಬಳಿ ಅಡ್ಯಾರ್ ಆನಂದ್ ಭವನ್ (ಎ2ಬಿ) ಹೋಟೆಲ್ ಮೇಲೆ ಶನಿವಾರ ತಹಶಿಲ್ದಾರ್ ವಿ. ಗೀತಾ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎನ್.ವಿ.ಬಾಬು, ಆರೋಗ್ಯ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು.

ಈ ವೇಳೆ ಹೋಟೆಲಿಗೆ ₹1ಲಕ್ಷ ದಂಡ ವಿಧಿಸಿ ಅಂತಿಮ ನೋಟೀಸ್ ಜಾರಿ ಮಾಡಲಾಯಿತು.

ಏಪ್ರಿಲ್ 7ರಂದು ನಡೆದ ಮೊದಲ ದಾಳಿಯಲ್ಲಿ ಹೋಟೆಲ್ನಲ್ಲಿ ಅವಧಿ ಮೀರಿದ ಹಾಲು, ಮೊಸರು ಪದಾರ್ಥಗಳು ಪತ್ತೆಯಾಗಿದ್ದವು. ಅವಧಿ ಮೀರಿದ ಪದಾರ್ಥಗಳನ್ನು ಇತರ ಆಹಾರದೊಂದಿಗೆ ಮಿಶ್ರಣ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿತ್ತು ಎಂಬುದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನುಮತಿ ಪಡೆದು ಅಧಿಕಾರಿಗಳು ಪುನಃ ದಾಳಿ ನಡೆಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಗುಣ ಮಾಹಿತಿ ನೀಡಿ, ಅವಧಿ ಮೀರಿದ 15 ಕೆಜಿ ಮೊಸರು ಮತ್ತು 100 ಲೀಟರ್ ಹಾಲನ್ನು ಲಸ್ಸಿ ಮತ್ತು ಮೊಸರು ತಯಾರಿಕೆಗೆ ಬಳಸಲಾಗುತ್ತಿತ್ತು ಎಂದು ತಿಳಿಸಿದರು. ತಹಶಿಲ್ದಾರ್ ಗೀತಾ ಅವರು, ನೋಟೀಸ್ ಬಳಿಕವೂ ಅಕ್ರಮ ಕಂಡು ಬಂದಲ್ಲಿ ಹೋಟೆಲಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಾಳಿಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಎನ್.ವಿ.ಬಾಬು, ಜಿಲ್ಲಾ ಆಹಾರ ಅಂಕಿತ ಅಧಿಕಾರಿ ಡಾ.ರಾಕೇಶ್, ಪೊಲೀಸ್ ಅಧಿಕಾರಿ ಭಾಷಾ, ಆರೋಗ್ಯ ನಿರೀಕ್ಷಕ ಎಂ. ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-18-2097090322

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.