ಮುಳಬಾಗಿಲು: ಕುಂಟೆ ನೀರಿನಲ್ಲಿ ಆಟೊ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ಮುಳಬಾಗಿಲು ನಗರದ ಖಲೀಫಾ ಮೊಹಲ್ಲಾದ ಇನಾಯತ್ ಎಂಬುವವರ ಮಗ ಅಫ್ರೀದ್ (15) ಮೃತ ಬಾಲಕ. ಅಫ್ರೀದ್ ತನ್ನ ತಂದೆಯ ಜೊತೆಯಲ್ಲಿ ಭಾನುವಾರ ನಗರದಿಂದ ಶ್ರೀನಿವಾಸಪುರ ಕಡೆಗೆ ಹೋಗುವ ತಿರುಪತಿ ಗಂಗಮ್ಮ ದೇವಾಲಯ ಸಮೀಪದ ನೀರಿನ ಕುಂಟೆಯಲ್ಲಿ ಇಬ್ಬರು ಆಟೊ ತೊಳೆಯುತ್ತಿದ್ದರು.

ತಂದೆ ಒಂದು ಕಡೆ ಹಾಗೂ ಮಗ ಒಂದು ಕಡೆಗೆ ಆಟೊ ತೊಳೆಯುತ್ತಿದ್ದಾಗ ಅಫ್ರೀದ್ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಕೂಡಲೇ ತಂದೆ ಮಗನನ್ನು ನೀರಿನಿಂದ ಎತ್ತಲು ಪ್ರಯತ್ನಿಸುತ್ತಾ ಕಿರುಚಾಡಿ ಸುತ್ತಮುತ್ತಲಿನ ಜನರನ್ನು ಕರೆದಿದ್ದಾರೆ. ಸ್ಥಳೀಯರು ಬಂದು ಬಾಲಕನನ್ನು ಮೇಲಕ್ಕೆ ಎತ್ತವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-18-660564571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.