ಮುಳಬಾಗಿಲು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ದೇಶಿ ಹಬ್ಬ ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನ ಆಚರಿಸಲಾಯಿತು.

ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಪ್ಪಟ ದೇಶಿ ಸಂಸ್ಕೃತಿ ಬಿಂಬಿಸುವ ಬಟ್ಟೆ, ನಾನಾ ಬಗೆಯ ಆಭರಣಗಳು, ಕೇಶ ವಿನ್ಯಾಸ ಮಾಡಿಕೊಂಡು ಕಾಲೇಜಿಗೆ ಬಂದಿದ್ದರು.

ಪ್ರತಿನಿತ್ಯ ಕಾಲೇಜಿನ ಸಮವಸ್ತ್ರದಲ್ಲಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಬಣ್ಣ ಬಣ್ಣದ ಸೀರೆ, ಲಂಗ ದಾವಣಿ, ಮಹಾರಾಣಿ ವೇಷಗಳಲ್ಲಿ ಮಿಂಚಿದರು. ಹಣೆ ತುಂಬಾ ದೊಡ್ಡ ಗಾತ್ರದ ಕುಂಕುಮ, ಉದ್ದದ ಜಡೆ, ಮಲ್ಲಿಗೆ ಕೊಪ್ಪಿನ ಅಲಂಕಾರ, ಮೊಗ್ಗಿನ ಜಡೆ, ಹಳೆಯ ಕಾಲದ ಮಾದರಿ ಚಪ್ಪಲಿಗಳು, ಹೀಗೆ ಅಪ್ಪಟ ನಮ್ಮ ದೇಶದ ಸಂಸ್ಕೃತಿಯ ವೇಷ ಭೂಷಣಗಳಲ್ಲಿ ಮಿಂಚಿದರು.

ಯುವಕರು (ವಿದ್ಯಾರ್ಥಿಗಳು) ಬಿಳಿ ಪಂಚೆ, ಅಂಗಿ, ಕಚ್ಚೆ, ನಿಕ್ಕರ್, ಪಟ್ಟಾಪಟ್ಟಿ ನಿಕ್ಕರು ಮತ್ತಿತರರ ವೇಷ ಭೂಷಣಗಳನ್ನು ಧರಿಸಿದ್ದರು.

ಮಹಿಳಾ ಪ್ರಾಧ್ಯಾಪಕರು ತಾವು ಯಾರಿಗೂ ಕಡಿಮೆ ಇಲ್ಲದಂತೆ ಕಾಟನ್ಸೀರೆ, ಅಲಂಕಾರ, ಕೇಶ ವಿನ್ಯಾಸ, ಓಲೆ, ಜುಮುಕಿ, ಬುಗುಡಿ, ಡಾಬು ಮತ್ತಿತರರ ಆಭರಣಗಳನ್ನು ಧರಿಸಿ ಮಿಂಚಿದರು. ಗ್ರಂಥಪಾಲಕಿ ಪುಷ್ಪಲತಾ ರೆಡ್ಡಿ ಅವರು ಅಪ್ಪಟ ದೇವಲೋಕದ ಕನ್ಯೆಯಂತೆ ಅಲಂಕಾರ ಮಾಡಿಕೊಂಡು ಹಳೆಯ ಕಾಲದ ಹಾಡಿಗೆ ಕುಣಿದು ಕುಪ್ಪಳಿಸಿದರು.

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರ್ಯಾಂಪ್ ವಾಕ್ ಮೂಲಕ ಫ್ಯಾಷನ್ ಲೋಕ ಪ್ರದರ್ಶಿಸಿದರು.

ಪ್ರಾಂಶುಪಾಲ ಡಾ.ಜಿ. ಮುನಿವೆಂಕಟಪ್ಪ, ಎ.ಕೃಷ್ಣಪ್ಪ, ಎಂ.ಎನ್.ಮೂರ್ತಿ, ಶ್ರೀಧರ್, ಲಾರೆನ್ಸ್ ಪ್ರಸನ್ನ, ಎಲ್. ಸೀನಪ್ಪ, ಮೋಹನ ರೆಡ್ಡಿ, ಉಮಾ, ಶಶಿಕಲಾ, ವಸುಂಧರ, ನಳಿನಿ, ಸುಬ್ರಮಣಿ, ರವಿ, ಶಿವಪ್ರಸಾದ್, ಹರಿಕೃಷ್ಣ, ಪಾಲಾಕ್ಷ, ಭಾಗ್ಯಲಕ್ಷ್ಮಿ, ಆದಿನಾರಾಯಣ, ವೆಂಕಟೇಶ್, ಸೌಮ್ಯಪ್ರಭ, ಸರಿತಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-18-74100660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.