ಮುಳಬಾಗಿಲು: ತಾಲ್ಲೂಕಿನಾದ್ಯಂತ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ಸಣ್ಣ ಪುಟ್ಟ ಕುಂಟೆಗಳಲ್ಲಿ ನೀರು ತುಂಬಿದ್ದು, ರಸ್ತೆಗಳಲ್ಲಿ ನೀರು ಹರಿದಿದೆ. ಇದರಿಂದಾಗಿ ಸಾರ್ವಜನಿಕರು ಹಾಗೂ ಬೈಕ್ ಸವಾರರು ಸ್ವಲ್ಪ ಸಮಯ ಪರದಾಡುವಂತಾಯಿತು.

ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಪ್ರಾರಂಭವಾದ ಮಳೆ ಸಂಜೆ ಏಳು ಗಂಟೆಯಾದರೂ ಸುರಿದಿದೆ. ಇದರಿಂದ ಬಿಸಿಲು ಹಾಗೂ ಒಣ ಹವೆಯಿಂದ ರೋಸಿ ಹೋಗಿದ್ದ ಜನತೆಗೆ ಮಳೆ ತಂಪೆರೆಯಿತು.

ಮುಳಬಾಗಿಲು ನಗರ, ತಾಲ್ಲೂಕಿನ ಕಮ್ಮದಟ್ಟಿ, ಕಾಮನೂರು, ದೇವರಾಯ ಸಮುದ್ರ, ಕಾಂತರಾಜ ವೃತ್ತ, ಎನ್.ವಡ್ಡಹಳ್ಳಿ, ಆವಣಿ, ನಂಗಲಿ ಮತ್ತಿತರರ ಕಡೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿತ್ತು.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಮ್ಮದಟ್ಟಿಯಿಂದ ನಂಗಲಿಯವರೆಗೂ ಮಳೆ ನೀರು ರಸ್ತೆಯ ಗುಂಡಿಗಳಲ್ಲಿ ನಿಂತಿದ್ದರೆ, ಹೆದ್ದಾರಿ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಮಳೆಯಿಂದ ರಕ್ಷಿಸಿಕೊಳ್ಳಲು ಅಂಗಡಿ ಮುಂಗಟ್ಟು, ಮೇಲ್ಸೇತುವೆಗಳ ಕೆಳಗೆ ನಿಂತಿದ್ದರು. ಭಾರೀ ವಾಹನಗಳು ಹೆದ್ದಾರಿಯಲ್ಲಿ ನಿಧಾನವಾಗಿ ಸಂಚರಿಸಿದವು.

ರಾಷ್ಟ್ರೀಯ ಹೆದ್ದಾರಿ 75ರ ನರಸಿಂಹ ತೀರ್ಥ, ನಂಗಲಿ, ಎನ್.ವಡ್ಡಹಳ್ಳಿ, ತಾಯಲೂರು ವೃತ್ತ, ಕೆಜಿಎಫ್ ವೃತ್ತ ಮತ್ತಿತರರ ಕಡೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನೀರು ಕುಂಟೆಗಳಂತೆ ನಿಂತಿತ್ತು. ಇಡೀ ತಾಲ್ಲೂಕಿನಲ್ಲಿ ಸಂಜೆಯಾದರೂ ಮಳೆ ಬೀಳುತ್ತಲೇ ಇತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-18-571210037

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.