ಮುಳಬಾಗಿಲು: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75 ರ ಬಳಿಯ ಹೋಟೆಲ್ಗಳ ಬಳಿ ನೊಣಗಳ ಹಾವಳಿ ಹೆಚ್ಚಾಗಿದ್ದು, ನೊಣಗಳ ನಿಯಂತ್ರಣಕ್ಕೆ ನೂತನ ಬಗೆಯ ತಂತ್ರಗಳನ್ನು ಅಳವಡಿಸುತ್ತಿದ್ದಾರೆ.

ತಾಲ್ಲೂಕಿನ ಆವಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೆದ್ದಾರಿಯ ಬಳಿ ಇರುವ ಹೋಟೆಲ್ಗಳ ಬಳಿ ನೊಣಗಳು ಗುಂಯ್ ಗುಡುತ್ತಾ ತಿನ್ನುವ ಆಹಾರ, ಟೀ ಕಾಫಿ, ಜೂಸ್ ಮತ್ತಿತರರ ಖಾಲಿ ಗ್ಲಾಸ್, ತಟ್ಟೆ ಮತ್ತಿತರರ ವಸ್ತುಗಳ ಮೇಲೆ ನೊಣಗಳು ಗುಂಪಾಗಿ ಕೂರುತ್ತಿವೆ. ಇದರಿಂದ ಹೋಟೆಲ್ಗೆ ಬರುವ ಗ್ರಾಹಕರು ಬೇಸತ್ತಿದ್ದಾರೆ.

ಹೋಟೆಲ್ ಬಳಿ ಮಾತ್ರವಲ್ಲದೆ ಆಹಾರ ಉತ್ಪನ್ನ, ಚೇರು, ಟೇಬಲ್ಗಳ ಮೇಲೂ ನೊಣಗಳು ಇರುತ್ತಿದ್ದು, ಜನರು ಕುಳಿತುಕೊಳ್ಳಲು ವಾಕರಿಕೆ ಪಡುತ್ತಿದ್ದಾರೆ ಎಂದು ಹೋಟೆಲ್ ವ್ಯಾಪಾರಿಗಳ ಮಾತಾಗಿದೆ.

ಇನ್ನು ಹೋಟೆಲ್ ಮಾಲೀಕರು ನೊಣಗಳ ನಿಯಂತ್ರಣಕ್ಕೆ ಬಿಳಿಯಾದ ವಸ್ತ್ರ ಹಾಗೂ ಬಿಳಿ ಗೋಣಿ ಚೀಲಗಳ ಮೇಲೆ ಸಿಹಿಯಾದ ರಾಸಾಯನಿಕ ಸಾಮಾಗ್ರಿಗಳನ್ನು ಚೆಲ್ಲಿ ನೊಣಗಳು ರಾಸಾಯನಿಕ ವಸ್ತುಗಳನ್ನು ತಿನ್ನಲು ಬಂದು ಸಾಯುವಂತೆ ಮಾಡುತ್ತಿದ್ದಾರೆ. ಹಾಗಾಗಿ ಬಿಳಿ ವಸ್ತ್ರ ಹಾಗೂ ಗೋಣಿ ಚೀಲಗಳ ಮೇಲೆ ರಾಶಿ ನೊಣಗಳು ಸತ್ತು ಬಿದ್ದಿರುವುದು ಎಲ್ಲೆಂದರಲ್ಲಿ ಕಂಡು ಬರುತ್ತಿದೆ.

ಇನ್ನು ಹೆದ್ದಾರಿಯ ಸಮೀಪದಲ್ಲೇ ಕೆಲವು ಕೋಳಿಫಾರಂಗಳು ಹಾಗೂ ತೆರೆದ ಚರಂಡಿ ಕಾಲುವೆಗಳು ಇದ್ದು ಅವುಗಳಿಂದಲೇ ನೊಣಗಳ ಉತ್ಪತ್ತಿ ಹಾಗೂ ಹಾವಳಿ ಹೆಚ್ಚಾಗುತ್ತಿದೆ. ಹಾಗಾಗಿ ಪಂಚಾಯಿತಿ ವತಿಯಿಂದ ನೊಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-18-980439236

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.