ಮುಳಬಾಗಿಲು: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಒಡೆದು ಮನೆಯಲ್ಲಿದ್ದ ಸುಮಾರು 3.5 ಕೆಜಿ ನಾನಾ ಬಗೆಯ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಇರಗಮುತ್ತನಹಳ್ಳಿ ಬಳಿಯ ಬಾಬಣ್ಣಗಾರಿ ಮನೆಗಳಲ್ಲಿ ನಡೆದಿದೆ.

ತಾಲ್ಲೂಕಿನ ಬಾಬಣ್ಣಗಾರಿ ಮನೆಗಳ ವಾಸಿ ಸೀತಮ್ಮ ಎಂಬುವವರು ಮನೆಗೆ ಬೀಗ ಹಾಕಿಕೊಂಡು 23 ರಿಂದ 29 ರವರೆಗೆ ಪ್ರವಾಸಕ್ಕೆಂದು ತೆರಳಿದ್ದರು. ಶನಿವಾರ ಮನೆಗೆ ವಾಪಸ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಬೀಗ ಒಡೆದು ಮನೆಯಲ್ಲಿದ್ದ ಸುಮಾರು 250 ಗ್ರಾಂ ಬೆಳ್ಳಿಯ ದೇವರ ವಿಗ್ರಹದ ಮುಖವಾಡ, 200 ಗ್ರಾಂ ಬೆಳ್ಳಿ ದೀಪಗಳು, 250 ಗ್ರಾಂ ಬೆಳ್ಳಿ ತಟ್ಟೆ, 200 ಗ್ರಾಂ ಗಂಧದ ಕಡ್ಡಿ ಹಚ್ಚುವ ಸಾಧನ, 200 ಗ್ರಾಂ ಬೆಳ್ಳಿ ಚೊಂಬು, 250 ಗ್ರಾಂ ಪಂಚಲೋಹದ ವಿಗ್ರಹ, 250 ಗ್ರಾಂ ಬೆಳ್ಳಿಯ ದೀಪಸ್ತಂಬ, 250 ಗ್ರಾಂ ಬೆಳ್ಳಿಯ ಅರಿಶಿನ ಕುಂಕುಮದ ಬಟ್ಟಲು ಸೇರಿದಂತೆ ಸುಮಾರು 3.5 ಕೆಜಿ ಬೆಳ್ಳಿ ಸಾಮಗ್ರಿಗಳು ಹಾಗೂ ರೇಷ್ಮೆ ಸೀರೆಗಳನ್ನು ದೋಚಿ ಪರಾರಿಯಾಗಿದ್ದಾರೆಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-18-817240325

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.