ಮುಳಬಾಗಿಲು: ತಾಲ್ಲೂಕಿನಲ್ಲಿ ಗುರುವಾರ ಸಂಜೆ ಬಿದ್ದ ಭಾರೀ ಗಾಳಿ ಮಳೆಗೆ ಕೀಲಾಗಾಣಿ ಗ್ರಾಮದ ಬಾಳೆತೋಟ ಸಂಪೂರ್ಣ ಮುರಿದು ಬಿದ್ದಿದ್ದು, ಲಕ್ಷಾಂತರ ನಷ್ಟ ಸಂಭವಿಸಿದೆ.

ತಾಲ್ಲೂಕಿನಲ್ಲಿ ಗುರುವಾರ ಸಂಜೆಯಿಂದ ಮಧ್ಯರಾತ್ರಿಯವರೆಗೂ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರೆ, ಕೆಲವು ಕಡೆಗಳಲ್ಲಿ ಮಳೆ ಹಾಗೂ ಗಾಳಿ ಬೀಸಿದೆ. ಹಾಗಾಗಿ ತಾಲ್ಲೂಕಿನ ಕೀಲಾಗಾಣಿ ಗ್ರಾಮದ ಹೊರವಲಯದಲ್ಲಿ ರೈತ ಮಂಜುನಾಥ ಸ್ವಾಮಿ ಹಾಗೂ ಕೆ.ಎಂ.ಶ್ರೀನಿವಾಸ ಎಂಬುವವರ ಬಾಳೆತೋಟ ಸಂಪೂರ್ಣ ಮುರಿದು ಬಿದ್ದಿದೆ.

ಮಂಜುನಾಥ ಸ್ವಾಮಿ ಅವರು 1.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆತೋಟ ಫಸಲಿಗೆ ಬಂದಿದ್ದು, ಬಾಳೆ ಗೊನೆಗಳಿಂದ ತುಂಬಿತ್ತು. ಹಾಗಾಗಿ ಗಾಳಿ, ಮಳೆಗೆ ಬಹುತೇಕ ತೋಟ ನೆಲಕಚ್ಚಿದೆ. ಇದರಿಂದ ರೈತರಿಗೆ ಮೂರ್ನಾಲ್ಕು ಲಕ್ಷ ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.

ಇನ್ನೂ ಅದೇ ಗ್ರಾಮದ ಕೆ.ಎಂ.ಶ್ರೀನಿವಾಸ್ ಅವರ ತೋಟದಲ್ಲಿಯೂ ಸುಮಾರು ನಲವತ್ತು ಐವತ್ತು ಗಿಡಗಳು ನಾಶವಾಗಿದ್ದು, ನಷ್ಟ ಸಂಭವಿಸಿದೆ. ಇದರಿಂದ ರೈತರ ಬದುಕು ಬೀದಿಗೆ ಬಂದಂತಾಗಿದೆ ಎಂದರು.

ಬಾಳೆತೋಟ ನಾಶವಾದ ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ವಿ.ಗೀತಾ ಹಾಗೂ ಅಧಿಕಾರಿಗಳ ತಂಡ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ತಹಶೀಲ್ದಾರ್ ವಿ.ಗೀತಾ ಮಾತನಾಡಿ, ಇಬ್ಬರೂ ರೈತರ ತೋಟಗಳಲ್ಲೂ ನೂರಾರು ಗಿಡಗಳು ನಾಶವಾಗಿದ್ದು, ಶೇಕಡಾ 90ರಷ್ಟು ನಷ್ಟ ಉಂಟಾಗಿದೆ. ಹಾಗಾಗಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ಸಮಸ್ಯೆಯ ಚಿತ್ರಣ ತಿಳಿಸಿ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ತೋಟಗಾರಿಕಾ ಅಧಿಕಾರಿ ಪುನೀತ್, ಮುರುಗೇಶ್, ರಾಜಸ್ವ ನಿರೀಕ್ಷಕ ಸುಬ್ರಮಣಿ ಮತ್ತಿತರರ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-18-38214378

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.