ಮುಳಬಾಗಿಲು: ತಾಲ್ಲೂಕಿನ ವಿರುಪಾಕ್ಷಿ ಗ್ರಾಮದ ವಿರುಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಕಾಶಿಯ 28 ನಾಗಾ ಸಾಧುಗಳು ಇದೇ 28 ರಿಂದ ಏ.3ರವರೆಗೆ ಪೂಜೆ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಗ್ರಾಮಕ್ಕೆ ಶನಿವಾರ ಬಂದ ನಾಗಾ ಸಾಧುಗಳನ್ನು ಸ್ವಾಗತಿಸಿ ನಗರದ ಆಂಜನೇಯ, ಕುರುಡುಮಲೆಯ ವಿನಾಯಕ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ಪೂಜೆ ಸಲ್ಲಿಸಲಾಯಿತು.

ನಂತರ ನಗರದ ಕೆಇಬಿ ವೃತ್ತ, ಅಂಬೇಡ್ಕರ್ ವೃತ್ತ, ಬಜಾರು ಬೀದಿ, ಸೋಮೇಶ್ವರ ಪಾಳ್ಯ ಮೂಲಕ ವಿರುಪಾಕ್ಷಿ ಗ್ರಾಮದವರೆಗೆ ಮೆರವಣಿಗೆಯಲ್ಲಿ ಸಾಗಿದರು.

ವಿರುಪಾಕ್ಷೇಶ್ವರ ದೇವಾಲಯದಲ್ಲಿ ಗ್ರಾಮಸ್ಥರೊಂದಿಗೆ ಪೂಜೆ ಕುರಿತು ಚರ್ಚಿಸಿದ ಸಾಧುಗಳು ತಾವು ನಡೆಸಲಿರುವ ಮಹಾರುದ್ರಯಾಗ ಮತ್ತು ಏಕಕುಂಡ ಆತ್ಮ ಸಹಸ್ರಾರ್ಚನೆ ಸಿದ್ಧತೆ ಕುರಿತು ಚರ್ಚಿಸಿದರು.

ಲೋಕದಲ್ಲಿ ಎಂದಿಗೂ ಧರ್ಮ ಗೆಲ್ಲುತ್ತದೆ. ಅಧರ್ಮ ಸೋಲುತ್ತದೆ ಎಂದು ನಾಗಾ ಸಾಧು ಮಹಾಂತ ಓಂಪುರಿ ಹೇಳಿದರು. ನಂಗಲಿ ಸತೀಶ್ ಕುಮಾರ್, ವಕೀಲ ವಿ.ಜಯಪ್ಪ, ನಾಗಭೂಷಣ ಚಾರಿ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-18-951732330

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.